ಕರ್ನಾಟಕ

ಅಭಿವೃದ್ದಿಯೇ ನಮ್ಮ ಅಜೆಂಡ ಹೊರತು ಪ್ರತ್ಯೇಕ ರಾಜ್ಯದ ಬೇಡಿಕೆ ಅಲ್ಲ : ನಡಹಳ್ಳಿ

Pinterest LinkedIn Tumblr

Nadalliಬೆಂಗಳೂರು, ಜೂ.17- ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ನಮ್ಮ ಅಜೆಂಡಾ ಹೊರತು ಪ್ರತ್ಯೇಕ ರಾಜ್ಯದ ಬೇಡಿಕೆ ಅಲ್ಲ ಎಂದು ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಸ್ಪಷ್ಟಪಡಿಸಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸದಿದ್ದರೆ ಈ ಭಾಗದ ಜನರ

ಪತ್ಯೇಕತೆಯ ಕೂಗಿಗೆ ಸರ್ಕಾರವೇ ಉತ್ತರ ಕೊಡಬೇಕು. ಪ್ರಾದೇಶಿಕ ಅಸಮಾತನೆ ಹೋಗಲಾಡಿಸಲು ಹಾಗೂ ನಂಜುಂಡಪ್ಪ ಸಮಿತಿಯ ಶಿಫಾರಸ್ಸನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿಂದು ಒತ್ತಾಯಿಸಿದರು. ಜನಜಾಗೃತಿ ಜಾಥಾ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜೂ.24ರಿಂದ 28ರವರೆಗೆ ಐತಿಹಾಸಿಕ ನಗರ ವಿಜಯನಗರದಿಂದ ರಾಯಚೂರುವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಇದು ಪಕ್ಷಾತೀತ, ಜಾತ್ಯತೀತವಾದ ಕಾರ್ಯಕ್ರಮವಾಗಿದ್ದು, ಕನ್ನಡಪರ ಸಂಘಟನೆಗಳು, ಸಾಹಿತಿಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಭಾಗವಹಿಸಲಿವೆ ಎಂದು ಎ.ಎಸ್. ಪಾಟೀಲ್ ತಿಳಿಸಿದರು.

ಐದು ದಿನಗಳ ಕಾಲ ನಡೆಯುವ ಜಾಥಾದಲ್ಲಿ 13 ಜಿಲ್ಲೆಗಳ 3000ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡು ಉತ್ತರ ಕರ್ನಾಟಕ ಜಿಲ್ಲೆಗೆ ಆಗಿರುವ ಅನ್ಯಾಯಗಳ ಬಗ್ಗೆ ಕಲೆ, ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಇದು ಮೊದಲ ಹಂತರ ಜನಜಾಗೃತಿ ಕಾರ್ಯಕ್ರಮವಾಗಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಜನಾಂದೋಲನ ಮತ್ತಿರರ ಹೋರಾಟಗಳನ್ನು ನಡೆಸಲಾಗುವುದು ಎಂದು ವಿವರಿಸಿದರು. ಇದು ಯಾವುದೇ ರಾಜಕೀಯ ಪಕ್ಷ, ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟವಲ್ಲ. ಒಟ್ಟು ವ್ಯವಸ್ಥೆಯ ವಿರುದ್ಧ ನಡೆಯುತ್ತಿರುವ ಆಕ್ರೋಶವಾಗಿದೆ. ಒಂದು ವರ್ಷದ ಕಾಲ ಜನಜಾಗೃತಿ ಹಮ್ಮಿಕೊಂಡು ಬಳಿಕ ಎರಡನೇ ಹಂತದ ಹೋರಾಟ ಕೈಗೊಳ್ಳಲಾಗುವುದು. ಯಾರ ಅವಧಿಯಲ್ಲಿ ಯಾವ ಯಾವ ಅನ್ಯಾಯ ಉತ್ತರ ಕರ್ನಾಟಕಕ್ಕೆ ಆಗಿದೆ ಎಂಬುದರ ಬಗ್ಗೆಯೂ ಶೀಘ್ರವೇ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಉತ್ತರಕರ್ನಾಟಕದಲ್ಲಿ ನೀರಾವರಿ, ಕೃಷಿ ಆಧಾರಿತ ಕೈಗಾರಿಕೆ, ಕೈಗಾರಿಕಾ ಕಾರಿಡಾರ್, ಪ್ರವಾಸೋದ್ಯಮ, ಶಿಕ್ಷಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಬಂದರು ಅಭಿವದ್ಧಿ ಪಡಿಸಬೇಕು. ಮಾಹಿತಿ ತಂತ್ರಜ್ಞಾನ ಕಾರಿಡಾರ್ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಉತ್ತರ ಕರ್ನಾಟಕ ಟ್ರಸ್ಟ್ ಸ್ಥಾಪಿಸಿದ್ದು,  ಇದು ಅಭಿವೃದ್ಧಿಯ ನೀಲನಕಾಶೆಯನ್ನು ಸಿದ್ಧಪಡಿಸುತ್ತಿದೆ ಎಂದರು.

Write A Comment