ರಾಷ್ಟ್ರೀಯ

ಬಿಎಂಡಬ್ಲ್ಯೂ ಯಿಂದ ಲೀಟರ್ ಗೆ 250 ಕಿ.ಮೀ ಮೈಲೇಜ್ ನೀಡುವ ಕಾರು ಉತ್ಪಾದನೆ?

Pinterest LinkedIn Tumblr

BMW

ಭಾರತದಲ್ಲಿರುವ ಅತಿ ಹೆಚ್ಚು ಇಂಧನ ಕ್ಷಮತೆ ಹೊಂದಿರುವ ಕಾರುಗಳು ಪ್ರತಿ ಲೀಟರ್ ಗೆ ಹೆಚ್ಚೆಂದರೆ 27 .62 ಕಿ.ಮೀ ಮೈಲೇಜ್ ನೀಡುತ್ತಿದೆ. ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಪ್ರತಿ ಲೀಟರ್ ಗೆ 250 ಕಿ.ಮೀ ಮೈಲೇಜ್ ನೀಡುವ ಅತಿ ಹೆಚ್ಚು ಇಂಧನ ಕ್ಷಮತೆಯ ಕಾರನ್ನು ತಯಾರಿಸಲು ಸಿದ್ಧತೆ ನಡೆಸಿದೆಯಂತೆ!

ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯೂ, 04 .1  ಲೀಟರ್ ಗೆ 100 ಕಿ.ಮೀ ಮೈಲೇಜ್ ನೀಡಲಿದ್ದು ಪ್ರತಿ ಲೀಟರ್ ಗೆ 250 ಕಿ.ಮೀ ಮೈಲೇಜು ನೀಡುವ ಕಾರನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ ಎಂಬ ವದಂತಿ ಹಬ್ಬಿದೆ. ಅಟೋಮೊಬೈಲ್ ಗೆ ಸಂಬಂಧಿಸಿದ ವರದಿಯೊಂದರ ಪ್ರಕಾರ, ಕಾರ್ಬನ್ ಫೈಬರ್ ಪ್ಲಾಸ್ಟಿಕ್ ನಿಂದ ಕಾರಿನ ಮೇಲ್ಮೈ ನಿರ್ಮಾಣವಾಗಲಿದ್ದು ಅತಿ ಹೆಚ್ಚು ಇಂಧನ ಕ್ಷಮತೆ ಹೊಂದಿದ ಕಾರಿನ ತೂಕ 1200 ಕೆ.ಜಿಗಿಂತಲೂ ಕಡಿಮೆ ಇರಲಿದೆ ಎಂದು ಹೇಳಲಾಗಿದೆ.

ಲೀಟರ್ ಗೆ 250 ಕಿ.ಮೀ ಮೈಲೇಜ್ ನೀಡುವ ಕಾರಿನ ಇಂಜಿನ್ ಬಗ್ಗೆ ಈ ವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.  ವಿದ್ಯುತ್ ಮೋಟರ್ ಮತ್ತು ಒಂದು 2-ಸಿಲಿಂಡರ್ ಪೆಟ್ರೋಲ್ ಎಂಜಿನ್ (ಜನರೇಟರ್) ಇರಲಿದೆ ಎಂದು ಹೇಳಲಾಗಿದೆ. ವೋಕ್ಸ್ ವ್ಯಾಗನ್ ನ ಎಕ್ಸ್ ಎಲ್ 1 ಕಾರು ಪ್ರತಿ ಲೀಟರ್ ಗೆ 111 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿತ್ತು. ಈಗ ಅದಕ್ಕಿಂತಲೂ ಅಧಿಕ ಕ್ಷಮತೆಯ ಕಾರು ತಯಾರಾಗಲಿದೆ ಎಂಬ ಮಾತು ಕೇಳಿಬಂದಿದೆ.

Write A Comment