ರಾಷ್ಟ್ರೀಯ

ಸರ್ವ ರೋಗಗಳಿಗೂ ದಿವ್ಯೌಷಧ ಗೋಮೂತ್ರ

Pinterest LinkedIn Tumblr

cow-god

ಇಟ್ಟರೆ ಸಗಣಿಯಾದೆ.. ತಟ್ಟಿದರೆ ಬೆರಣಿಯಾದೆ.. ಸುಟ್ಟರೆ ನೊಸಲಿಗೆ ವಿಭೂತಿಯಾದೆ.. ನೀನಾರಿಗಾದೆಯೋ ಎಲೆಮಾನವ. ಇದು ಪಶುವಿನ ಉಪಯೋಗವನ್ನು ವಿವರಿಸುವ ಹಿಂದಿನ ತಲೆಮಾರಿನ ಹಾಡು. ಪಶುಗಳು ಯಾವ ರೀತಿ ನಮ್ಮ ಬದುಕಿಗೆ ಹೆಚ್ಚು ಉಪಯುಕ್ತ ಎಂಬದು ಇದರಿಂದ ತಿಳಿಯುತ್ತದೆ.

ಪ್ರಪಂಚದ 335 ಕೋಟಿ ದೇವರುಗಳಿಗೆ ತನ್ನ  ದೇಹದಲ್ಲಿ ಆಶ್ರಯ ನೀಡಿರುವ ಕಾಮಧೇನು. ಗೋಮೂತ್ರ ಎಲ್ಲಾ ರೋಗಗಳಿಗೂ ಸಂಜೀವಿನಿ.. ಭಾರತೀಯ ಆಯುರ್ವೇದ ಔಷಧ ಪದ್ಧತಿಯಲ್ಲಿ ಗೋಮೂತ್ರಕ್ಕೆ ವಿಶೇಷ ಸ್ಥಾನ. ಕೇವಲ ಮರ ಗಿಡಗಳಿಗೆ ಮಾತ್ರವಲ್ಲದೇ ಮನುಷ್ಯನಿಗೆ ಬರುವ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಕುಷ್ಟರೋಗಗಳಿಗೆ ಉತ್ತಮ ಮದ್ದು. ಹಾಗೆಯೇ ಜಠರದ ಅಲ್ಸರ್, ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ.

ಇಂದಿನ ದಿನಗಳಲ್ಲಿ ಗೋಮೂತ್ರವನ್ನು ಏಡ್ಸ್ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಪ್ರತಿ ತಿಂಗಳು ಏಡ್ಸ್ ಪೀಡಿತರಿಗೆ ಗೋಮೂತ್ರ ಥೆರಪಿ ನೀಡಲಾಗುತ್ತದೆ. ತೀವ್ರವಾದ ಮೈಗ್ರೇನ್ ನಿಂದ ಬಳಲುತ್ತಿರುವವರು 3 ತಿಂಗಳ ಕಾಲ ಗೋಮೂತ್ರ ಥೆರಪಿ ಮಾಡಿಸಿಕೊಂಡರೇ ತಲೆನೋವು ಸಂಪೂರ್ಣ ಗುಣಮುಖವಾಗುತ್ತದೆ. ಇನ್ನು ಇಂದೋರ್ ನ ಗೋಮೂತ್ರ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನದಲ್ಲಿ , ಗೋಮೂತ್ರ ಥೆರಪಿ ಮಾಡಿಸಿಕೊಂಡ ಶೇಕಡ 90 ರಷ್ಟು ಜನರಲ್ಲಿ 80 ರಷ್ಟು ಮಂದಿಗೆ ಕಾಯಿಲೆಗಳು ಗುಣಮುಖವಾಗಿದೆ ಎಂದು ತಿಳಿಸಿದೆ.

ಗೋಮೂತ್ರ ಸೇವನೆಯಿಂದ ಮಲಬದ್ಧತೆ, ಮಾನಸಿಕ ಒತ್ತಡ ಗಳಿಂದ ದೂರವಿರಬಹುದು. ಗೋಮೂತ್ರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಮಕ್ಕಳಿಗೆ ಇದರ ಸೇವನೆ ಮಾಡಿಸುವುದರಿಂದ ಆರೋಗ್ಯವಾಗಿಡಬಹುದು. ಮಾನವ ದೇಹದಲ್ವಿನ ಅನುಪಯುಕ್ತ  ಅಂಶ  ಅಂದರೆ ಟಾಕ್ಸಿನ್ ಅನ್ನು ಹೊರಹಾಕಿ, ಸದಾ ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಇನ್ನು ಲಿವರ್ ಅನ್ನು ಆರೋಗ್ಯಯುತವಾಗಿಸುತ್ತೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ರಕ್ತವನ್ನು ಶುದ್ಧೀಕರಿಸುತ್ತೆ. ದೇಹಕ್ಕೆ ಸೇರ್ಪಡೆಯಾಗುವ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ.

ಗೋಮೂತ್ರದಲ್ಲಿ ಹಲವು ಮಿನರಲ್ಸ್ಇರುತ್ತದೆ. ಖನಿಜಾಂಶ ಕೊರತೆಯಿಂದ ಬಳಲುತ್ತಿರುವವರು ಸೇವಿಸಿದರೇ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಖನಿಜಾಂಶ ಲಭ್ಯವಾಗುತ್ತದೆ. ಗೊಮೂತ್ರ ಬುದ್ದಿ ಹಾಗೂ ಹೃದಯವನ್ನು ಸಮತೋಲನದಲ್ಲಿರಿಸುತ್ತದೆ. ಜೊತೆಗೆ ಎಲ್ಲಾ ರೀತಿಯ ಚರ್ಮ ರೋಗಗಳನ್ನು ವಾಸಿ ಮಾಡುವ ಶಕ್ತಿ ಗೋಮೂತ್ರಕ್ಕಿದೆ. ಗೋಮೂತ್ರದಿಂದ ಹಲವು ರೀತಿಯ ಸೋಪುಗಳನ್ನು ತಯಾರಿಸಿ ಬಳಸಲಾಗುತ್ತಿದೆ.

ಇದಿಷ್ಟೆ ಅಲ್ಲದೇ ಗೋಮೂತ್ರದಲ್ಲಿ ಇನ್ನು ಹಲವು ಔಷಧೀಯ ಗುಣಗಳಿದ್ದು. ಎಲ್ಲಾ ರೋಗಗಳಿಗೆ ರಾಮಭಾಣವಾಗಿದೆ.

Write A Comment