ರಾಷ್ಟ್ರೀಯ

ಲಲಿತ್ ಮೋದಿಯನ್ನು ಭಾರತಕ್ಕೆ ಬರುವಂತೆ ಏಕೆ ಹೇಳಿಲ್ಲ?: ಕೇಂದ್ರಕ್ಕೆ ಚಿದಂಬರಂ ಪ್ರಶ್ನೆ

Pinterest LinkedIn Tumblr

Chidambaram

ಚೆನ್ನೈ: ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಐಪಿಎಲ್ ಹಗರಣದಲ್ಲಿ ಶಶಿ ತರೂರ್ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕಾಂಗ್ರೆಸ್ ನಾಯಕರು ರಾಜಕೀಯ ಕಲಹಕ್ಕೆ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಲಲಿತ್ ಮೋದಿ ಮಾಡಿರುವ ಆರೋಪ ಸಂಬಂಧ ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿದಂಬರಂ ಅವರು, ಲಲಿತ್ ಮೋದಿ ತಮ್ಮ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಲಲಿತ್ ಮೋದಿ ಪ್ರಕರಣ ಸಂಬಂಧ ಯುಪಿಎ ಅಧಿಕಾರಾವಧಿಯಲ್ಲಿ ಬ್ರಿಟನ್ ನ ಅಧಿಕಾರಿಗಳಿಗೆ ಬರೆದಿರುವ ಪತ್ರಗಳನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸಿದರೆ ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಮಾಡಲಾಗಿರುವ ಆರೋಪಗಳಿಗೆ ಉತ್ತರ ಸಿಗಲಿದೆ ಎಂದರು.

ಲಲಿತ್ ಮೋದಿ ವಿರುದ್ಧ ಪ್ರಕರಣ ಬಯಲಿಗೆ ಬಂದಾಗಿನಿಂದಲೂ ಇಡಿ ತನಿಖೆಗೆ ಸಹಕರಿಸುತಿಲ್ಲ. ಹೀಗಾಗಿ ಲಲಿತ್ ಮೋದಿಯನ್ನು ಕೇಂದ್ರ ಸರ್ಕಾರ ಭಾರತಕ್ಕೆ ಕರೆ ತಂದು ಇಡಿ ತನಿಖೆ ಎದುರಿಸುವಂತೆ ಮಾಡಲಿ ಎಂದು ಚಿದಂಬರಂ ಸವಾಲು ಹಾಕಿದ್ದಾರೆ.

ಕಳೆದ 2011ರಲ್ಲೇ ಲಲಿತ್ ಮೋದಿ ಪಾಸ್ ಪೋರ್ಟ್ ರದ್ದಾಗಿತ್ತು. ಹೀಗಾಗಿ ಸತತ 4 ವರ್ಷಗಳಿಂದಲೂ ತಲೆ ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ. ಲಲಿತ್ ಮೋದಿ ವಿರುದ್ಧ ಸುಮಾರು 16 ಪ್ರಕರಣಗಳು ದಾಖಲಾಗಿವೆ ಎಂದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನನ್ನ ವಿರುದ್ಧವಾಗಿತ್ತು. ಪಿ.ಚಿದಂಬರಂ ಅವರು ನನ್ನನ್ನು ದೇಶ ಬಿಟ್ಟು ಓಡಿಸಲು ಸಂಚು ರೂಪಿಸಿದ್ದರು. ಈ ಸಂದರ್ಭದಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಶಶಿ ತರೂರ್ ಸಹ ಸುಳ್ಳು ಹೇಳಿದ್ದರು. ಇದೇ ಕಾರಣಕ್ಕೇ ಅವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಅಲ್ಲದೆ, ಬ್ರಿಟನ್‍ನಲ್ಲಿ ನನ್ನ ಪೌರತ್ವಕ್ಕೆ ಯುಪಿಎ ಸರ್ಕಾರ ಅಡ್ಡಗಾಲು ಹಾಕಿತ್ತು ಎಂದು ಲಲಿತ್ ಆಕ್ರೋಶ ವ್ಯಕ್ತಪಡಿಸಿದ್ದರು.

Write A Comment