ರಾಷ್ಟ್ರೀಯ

ಮಹಾರಾಷ್ಟ್ರ ಮಾಜಿ ಸಚಿವ ಭುಜ್‌ಬಲ್ ನಿವಾಸಗಳ ಮೇಲೆ ಎಸಿಬಿ ದಾಳಿ

Pinterest LinkedIn Tumblr

Maharashtr

ಮುಂಬೈ, ಜೂ.17: ಪುಣೆ, ನಾಸಿಕ್, ಥಾಣೆ ಹಾಗೂ ಮುಂಬೈ ನಗರಗಳಲ್ಲಿರುವ ಮಹಾರಾಷ್ಟ್ರ ಮಾಜಿ ಸಚಿವ ಛಗನ್ ಭುಜ್‌ಬಲ್ ಅವರಿಗೆ ಸೇರಿದ ಮನೆಗಳು, ಕಚೇರಿಗಳು ಹಾಗೂ ಭೂ ಆಸ್ತಿಗಳಿಗೆ ದಾಳಿ ನಡೆಸಿರುವ ಭ್ರಷ್ಟಾಚಾರ ವಿರೋಧಿಗಳ (ಎಸಿಬಿ) ಇಂದು ಬೆಳಗ್ಗೆ ತೀವ್ರ ಪರಿಶೀಲನೆ ನಡೆಸಿದೆ.

ಈ ದಾಳಿಯಲ್ಲಿ ಹೆಲಿಪ್ಯಾಡ್ ಹೊಂದಿರುವ ಬೃಹತ್ ಬಂಗಲೆ 65 ಎಕರೆ ಭೂಮಿ, ನಿವೇಶನಗಳು ಎಲ್ಲ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಲ್ಲಿ ನಿರ್ಮಿಸಲಾಗಿರುವ ಮಹಾರಾಷ್ಟ್ರ ಭವನ ನಿರ್ಮಾಣದ ಗುತ್ತಿಗೆಯಲ್ಲಿ ಗುತ್ತಿಗೆದಾರರಿಂದ 100 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಈ ದಾಳಿ ನಡೆದಿದೆ.

ಆ ಸಂದರ್ಭ ಛಗನ್ ಭುಜ್‌ಬಲ್ ಮಹಾರಾಷ್ಟ್ರದ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪಿಡಬ್ಲ್ಯೂಡಿ ಸಚಿವರಾಗಿದ್ದರು. ಎನ್‌ಸಿಪಿಯ ಹಿರಿಯ ನಾಯಕ ಭುಜ್‌ಬಲ್ ಹಾಗೂ ಇತರ ಐವರ ವಿರುದ್ಧ ಜೂ.8ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಭುಜ್‌ಬಲ್ ಈ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದ್ದರು. ದೆಹಲಿಯ ಮಹಾರಾಷ್ಟ್ರ ಭವನ ನಿರ್ಮಾಣದಲ್ಲಿ ಛಗನ್ ಭುಜ್‌ಬಲ್ ಚಮನ್‌ಕರ್ ಎಂಟರ್‌ಪ್ರೈಸಸ್ ಕಂಪೆನಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿತ್ತು.

Write A Comment