ರಾಷ್ಟ್ರೀಯ

ಬೆಲೆ ಬಾಳುವ ಆಸ್ತಿ ಮಾರಾಟ ಮಾಡಿದ ಬಾಲಿವುಡ್ ನಟ

Pinterest LinkedIn Tumblr

2087riteish-deshmukh-readಮುಂಬೈ: ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿಸಬೇಕೆಂಬ ಉದ್ದೇಶದಿಂದ ಮುಂಬೈನ ಪ್ರತಿಷ್ಟಿತ ಪಾಲಿ ಹಿಲ್ ಪ್ರದೇಶದಲ್ಲಿ ಬೃಹತ್ ನಿವೇಶನ ಖರೀದಿಸಿದ್ದ ಬಾಲಿವುಡ್ ನಟರೊಬ್ಬರು ಕಾಂಪ್ಲೆಕ್ಸ್ ಕಟ್ಟುವುದಕ್ಕೆ ಅಲ್ಲಿನ ನಿವಾಸಿಗಳ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇಸತ್ತು ತಮ್ಮ ನಿವೇಶನ ಮಾರಾಟ ಮಾಡಿದ್ದಾರೆ.

ಬಾಲಿವುಡ್ ನಟ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ ಪುತ್ರ ರಿತೇಶ್ ದೇಶ್ ಮುಖ್ ಬಾಲಿವುಡ್ಡಿನ ಹಿರಿಯ ನಟ ಅಮ್ಜದ್ ಖಾನ್ ಅವರಿಗೆ ಸೇರಿದ್ದ ಈ ನಿವೇಶನವನ್ನು ಅವರ ಕುಟುಂಬಸ್ಥರಿಂದ ಎಂಟು ವರ್ಷಗಳ ಹಿಂದೆ ಖರೀದಿ ಮಾಡಿದ್ದು, ಇಲ್ಲಿ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಬೇಕೆಂಬ ಕನಸನ್ನು ಅವರು ಹೊಂದಿದ್ದರೆನ್ನಲಾಗಿದೆ.

ಆದರೆ ಪಾಲಿ ಹಿಲ್ ನ ನಿವಾಸಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಲ್ಲದೇ ಬೃಹತ್ ಮುಂಬೈ ಮಹಾನಗರ ಪಾಲಿಕೆ ಸಹ ತಕರಾರು ಎತ್ತಿತ್ತೆನ್ನಲಾಗಿದೆ. ಇದೆಲ್ಲ ವಿದ್ಯಾಮಾನಗಳಿಂದ ಬೇಸತ್ತ ರಿತೇಶ್ ದೇಶ್ ಮುಖ್ ತಮ್ಮ ಈ ನಿವೇಶವನ್ನು ವಾಣಿಜ್ಯೋದ್ಯಮಿಯೊಬ್ಬರಿಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆನ್ನಲಾಗಿದೆ.

Write A Comment