ರಾಷ್ಟ್ರೀಯ

ಮೊಬೈಲ್ ಬದಲಿಗೆ ಕಲ್ಲು ಕಳುಹಿಸಿದ ಅಮೆಜಾನ್ !

Pinterest LinkedIn Tumblr

483615KMK20

ವಿಶಾಖಪಟ್ಟಣ: ಆನ್ ಲೈನ್ ಮಾರುಕಟ್ಟೆ ಸಂಸ್ಥೆಯಾದ ಫ್ಲಿಫ್ ಕಾರ್ಟ್ ಮೊಬೈಲ್ ಬುಕ್ ಮಾಡಿದ್ದ ತೆಲಂಗಾಣದ ಗ್ರಾಹಕರೊಬ್ಬರಿಗೆ ಮಾವಿನ ಹಣ್ಣು ಕಳುಹಿಸುವ ಮೂಲಕ ಯಡವಟ್ಟು ಮಾಡಿದ್ದರೆ, ಈ ವಿಚಾರದಲ್ಲಿ ತಾನೇನು ಕಮ್ಮಿಯಿಲ್ಲವೆಂಬಂತೆ ಮತ್ತೊಂದು ಆನ್ ಲೈನ್ ಮಾರುಕಟ್ಟೆ ಸಂಸ್ಥೆ ಅಮೆಜಾನ್ ಮೊಬೈಲ್ ಬದಲಿಗೆ ಕಲ್ಲುಗಳನ್ನು ಕಳುಹಿಸಿದೆ.

ವಿಶಾಖಪಟ್ಟಣದ ನಿವಾಸಿ ಬರಾಯ್ ಎಂಬವರು ಮೈಕ್ರೋಸಾಫ್ಟ್ ಲೂಮಿಯಾ 640 ಮೊಬೈಲನ್ನು ಅಮೆಜಾನ್ ನಲ್ಲಿ ಜೂನ್ 12 ರಂದು ಬುಕ್ ಮಾಡಿದ್ದರು. ಜೂನ್ 14 ಕ್ಕೆ ಅಮೆಜಾನ್ ಸಂಸ್ಥೆಯಿಂದ ಇವರಿಗೆ ಪಾರ್ಸೆಲ್ ಬಂದಿದ್ದು, ಬಿಚ್ಚಿ ನೋಡಿದರೆ ಎರಡು ಕಲ್ಲುಗಳನ್ನು ಸುಂದರವಾಗಿ ಪ್ಯಾಕ್ ಮಾಡಿ ಕಳುಹಿಸಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಈ ಕುರಿತು ಬರಾಯ್ ಅಮೆಜಾನ್ ಸಂಸ್ಥೆಯಲ್ಲಿ ದೂರು ದಾಖಲಿಸಿದ್ದು, ಈ ಕುರಿತು ತನಿಖೆ ನಡೆಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಬರಾಯ್ ಅವರು ತಮಗಾದ ವಂಚನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದಾರೆ. ಆನ್ ಲೈನ್ ಮಾರುಕಟ್ಟೆ ಸಂಸ್ಥೆಗಳ ಮೂಲಕವೇ ಖರೀದಿ ಮಾಡಲು ಬಹುತೇಕರು ಬಯಸುತ್ತಿದ್ದು, ಇದರ ಮಧ್ಯೆ ಇಂತಹ ಪ್ರಕರಣಗಳು ನಡೆಯುತ್ತಿರುವ ಕಾರಣ ಅವುಗಳ ಮೇಲೆ ವಿಶ್ವಾಸಾರ್ಹತೆಯನ್ನೇ ಜನ ಕಳೆದುಕೊಳ್ಳುವಂತಾಗಿದೆ.

Write A Comment