ಮನೋರಂಜನೆ

‘ಬೇಬಿ’ ಶ್ಯಾಮಿಲಿ ಜತೆ ರೋಮ್ಯಾನ್ಸ್ ಮಾಡ್ತಾರಂತೆ ಸುದೀಪ್ !

Pinterest LinkedIn Tumblr

5431sudeep-shamili

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಕಿಚ್ಚ ಸುದೀಪ್ ಅವರ ಜತೆ ‘ಬೇಬಿ’ ಶ್ಯಾಮಿಲಿ ರೋಮ್ಯಾನ್ಸ್ ಮಾಡಲಿದ್ದಾರೆ.

ಹೌದು.ಲಿಂಗಾ ಸಿನಿಮಾ ಬಳಿಕ ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ಸುದೀಪ್ ಅವರ ಚಿತ್ರವನ್ನು  ನಿರ್ದೇಶಿಸುತ್ತಿದ್ದು ತಮಿಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಬರುತ್ತಿರುವ ಈ ದ್ವಿಭಾಷಾ ಚಿತ್ರದಲ್ಲಿ ಶ್ಯಾಮಿಲಿ ಸುದೀಪ್ ಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬಾಲನಟಿಯಾಗಿದ್ದಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದ ಶ್ಯಾಮಿಲಿ ಇದೀಗ ಸುದೀಪ್ ಗೆ ನಾಯಕಿಯಾಗಿದ್ದು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ವಿಶೇಷವೆಂದರೆ ಸುದೀಪ್ ಅವರು ತಮಿಳು ಚಿತ್ರದಲ್ಲಿ ಸಂಪೂರ್ಣ ನಾಯಕರಾಗಿ ಮೂಡಿಬರುತ್ತಿರುವ ಮೊದಲ ತಮಿಳು ಚಿತ್ರ ಇದಾಗಿದ್ದು, ಇದರಲ್ಲಿ ನಾಯಕಿಯಾಗಿ ಶ್ಯಾಮಿಲಿಯೂ ಆಯ್ಕೆಯಾಗಿರುವುದರಿಂದ ಸಾಕಷ್ಟು ಕುತೂಹಲ ಮೂಡಿದೆ..

Write A Comment