ರಾಷ್ಟ್ರೀಯ

‘ನಾನೇ ನಿಜವಾದ ಮುಸ್ಲಿಂ’ : ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದಿತ ಹೇಳಿಕೆ

Pinterest LinkedIn Tumblr

Sakshi Maharaj

ನವದೆಹಲಿ, ಜೂ.15: ಇದುವರೆಗೆ ಸಣ್ಣಪುಟ್ಟ ವಿವಾದಗಳನ್ನೇ ಸೃಷ್ಟಿಸುತ್ತಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ನಾನೇ ನಿಜವಾದ ಮುಸ್ಲಿಂ ಆಗಿದ್ದೇನೆ ಮತ್ತು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಮಹಾನ್ ಯೋಗಪಟುವಾಗಿದ್ದರು ಎಂದು ಹೇಳುವ ಮೂಲಕ ಭಾರೀ ವಿವಾದ ಹುಟ್ಟುಹಾಕಿದ್ದಾರೆ.

ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನ ಆಚರಣೆ ಸಮೀಪಿಸುತ್ತಿದ್ದು, ಆ ದಿನದ ಯಶಸ್ಸಿಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇನ್ನಿಲ್ಲದ ಪ್ರಯತ್ನ ನಡೆಸಿರುವಂತೆಯೇ ಸಂಸದ ಸಾಕ್ಷಿ ಮಹಾರಾಜ್ ಈ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಇಸ್ಲಾಮ್‌ನಲ್ಲಿ ಮೊಹಮ್ಮದ್ ಪೈಗಂಬರ್ ಬಹಳ ದೊಡ್ಡ ಹೆಸರು. ಅವರು ಮಹಾಯೋಗಿ. ಇಮಾನ್ ಜತೆ ಗುರುತಿಸಿಕೊಂಡವನೇ ನಿಜವಾದ ಮುಸಲ್ಮಾನ. ಹಾಗಾಗಿ ನಾನೊಬ್ಬ ನೈಜ ಮುಸ್ಲಿಂ ಆಗಿದ್ದೇನೆ ಎಂಬುದು ಸಾಕ್ಷಿ ಮಹಾರಾಜರ ಹೇಳಿಕೆ. ಸೂರ್ಯ ನಮಸ್ಕಾರ ವಿರೋಧಿಸುವವರಿಗೆ ಕಿವಿಮಾತು ಹೇಳಿರುವ ಸಾಕ್ಷಿ ಸೂರ್ಯನಿಲ್ಲದೆ ನಾವು, ನೀವು ಎಲ್ಲರೂ ಕುರುಡರೇ. ಸೂರ್ಯನನ್ನು ಮತೀಯವಾದದ ದೃಷ್ಟಿಯಿಂದ ನೋಡುವವರು, ಸೂರ್ಯನ ಬೆಳಕನ್ನು ಬಳಸಿಕೊಳ್ಳುವುದನ್ನು ಬಿಡುತ್ತಾನೆಯೇ ಎಂಬುದು ಸಾಕ್ಷಿ ಪ್ರಶ್ನೆಯಾಗಿದೆ.

Write A Comment