ರಾಷ್ಟ್ರೀಯ

ಕೊಲೆ ಪ್ರಕೃತಿಯ ಸಹಜ ಧರ್ಮ’ : ಯುಪಿ ಸಚಿವರ ಮೂರ್ಖ ಹೇಳಿಕೆ

Pinterest LinkedIn Tumblr

minister-UP

ಲಕ್ನೌ, ಜೂ.15: ಉತ್ತರ ಪ್ರದೇಶದ ತೋಟಗಾರಿಕೆ ಸಚಿವ ಪರಸನಾಥ್ ಯಾದವ್ ಅವರ ಪ್ರಕಾರ ಯಾವುದೇ ಕೊಲೆ ಪ್ರಕೃತಿ ಸಹಜವಾದ ಧರ್ಮ. ಅದನ್ನು ನಿಯಂತ್ರಿಸಲು ಸಾಧ್ಯವಾಗದು. ಈ ಪ್ರಕ್ರಿಯೆ ಹೀಗೆ ನಡೆಯುತ್ತಿರುತ್ತದೆಯಂತೆ! ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸಚಿವ ರಾಮಮೂರ್ತಿಯ ಅಕ್ರಮ ಭೂಕಬಳಿಕೆ ವರದಿ ಮಾಡಿದ್ದ ಪತ್ರಕರ್ತ ಜಗೇಂದರ್ ಮೇಲಿನ ಹಲ್ಲೆ ಮತ್ತು ಸಜೀವವಾಗಿ ಸುಟ್ಟು ಹಾಕಿರುವ ಪೈಶಾಚಿಕ ಕೃತ್ಯದ ಬಗ್ಗೆ ಸಚಿವರ ಈ ಹೇಳಿಕೆ ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಹೋಗಿದ್ದು, ಜನರ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಸಚಿವ ಪರಸನಾಥ ಯಾದವ್‌ನನ್ನು ಸಂಪುಟದಿಂದ ವಜಾ ಮಾಡಬೇಕು ಮತ್ತು ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ. ವಿಶೇಷವೆಂದರೆ ಪತ್ರಕರ್ತರ ಮೇಲೆ ಇಷ್ಟೆಲ್ಲಾ ದೌರ್ಜನ್ಯಗಳು ನಡೆದಿದ್ದರೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಾತ್ರ ಈ ಬಗ್ಗೆ ಇನ್ನೂ ಏನೂ ಬಾಯಿ ಬಿಟ್ಟಿಲ್ಲ. ಜೂನ್ ತಿಂಗಳಲ್ಲಿ ನಿನ್ನೆ ಮೂರನೇ ಬಾರಿ ಪತ್ರಕರ್ತರ ಮೇಲಿನ ಹಲ್ಲೆ ಘಟನೆ ನಡೆದಿದೆ. ಫಿಲಿಬಿಟ್‌ನಲ್ಲಿ ಸಚಿವರ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗಿಳಿದಿದ್ದಾರೆ.

Write A Comment