ರಾಷ್ಟ್ರೀಯ

ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಕೆ. ಮೀನಾ ಕಚೇರಿಯಲ್ಲಿ ಗುಪ್ತಚರ ಸಾಧನ ಪತ್ತೆ

Pinterest LinkedIn Tumblr

par

ನವದೆಹಲಿ: ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಇತ್ತೀಚೆಗಷ್ಟೆ ನೇಮಕಗೊಂಡ ಎಂ.ಕೆ.ಮೀನಾ ಕಚೇರಿಯಲ್ಲಿ ಗೂಢಚಾರಿಕೆ ಸಾಧನ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಗೂಢಚಾರಿಕೆ ರಹಸ್ಯ ಸಾಧನ ಪತ್ತೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಇದನ್ನು ಉದ್ದೇಶಪೂರ್ವಕವಾಗಿ ಇಡಲಾಗಿದಯೇ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ತಮ್ಮ ಚೇಂಬರ್‌ನಲ್ಲಿರುವ ಟೇಬಲ್ ಅಡಿಯಲ್ಲಿ ಪೆನ್‌ಡ್ರೈವ್ ಪತ್ತೆಯಾಗಿದೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಸಾವಿರಾರು ಪೆನ್‌ಡ್ರೈವ್‌ಗಳನ್ನು ಖರೀದಿ ಮಾಡಿತ್ತು ಎನ್ನುವ ಬಗ್ಗೆ ಕೂಡಾ ತನಿಖೆ ನಡೆಸಲಾಗುತ್ತಿದೆ ಎಂದು ಎಂ.ಕೆ. ಮೀನಾ ತಿಳಿಸಿದ್ದಾರೆ

ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಕೆ.ಮೀನಾ ನೇಮಕ ಕುರಿತಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗೌವರ್ನರ್ ಮದ್ಯ ಭಾರಿ ವಾಕ್ಸಮರ ನಡೆದಿತ್ತು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿದ್ದರು.

ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಎಸ್‌.ಎಸ್.ಯಾದವ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜಂಟಿ ಆಯುಕ್ತರಾಗಿದ್ದ ಎಂ.ಕೆ.ಮೀನಾ ಅವರನ್ನು ನೇಮಕ ಮಾಡಿ ಲೆಫ್ಟಿನೆಂಟ್ ಗೌವರ್ನರ್ ನಜೀಬ್ ಜಂಗ್ ಆದೇಶ ಹೊರಡಿಸಿದ್ದರು.

Write A Comment