ರಾಷ್ಟ್ರೀಯ

ಕಳ್ಳ ಮಾರ್ಗದಲ್ಲಿ ಬಂದ ಚಿನ್ನದ ಮೊತ್ತ ಕೇಳಿದ್ರೆ ದಂಗು ಬಡಿಯುತ್ತೀರಿ..!

Pinterest LinkedIn Tumblr

Gold granules are pictured at the Austrian Gold and Silver Separating Plant 'Oegussa' in Vienna

ನವದೆಹಲಿ: ವಿಮಾನ ನಿಲ್ದಾಣ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆಯನ್ನು ಎಷ್ಟೇ ಬಿಗಿಗೊಳಿಸಿದ್ದರೂ ಕಳ್ಳ ಮಾರ್ಗದಲ್ಲಿ ಚಿನ್ನ ತರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕಾಗಿ ಕಳ್ಳ ಸಾಗಾಣಿಕೆದಾರರು ಅನುಸರಿಸುತ್ತಿರುವ ಮಾರ್ಗಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದ್ದು, 2014-15 ನೇ ಸಾಲಿನಲ್ಲಿ ಇದುವರೆಗೂ 1,120 ಕೋಟಿ ರೂ. ಬೆಲೆ ಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಇನ್ನೆಷ್ಟು ಮೊತ್ತದ ಚಿನ್ನ ದೇಶ ಪ್ರವೇಶಿಸಿರಬಹುದೆಂಬ ಸಂಗತಿ ಊಹೆಗೂ ನಿಲುಕದಂತಾಗಿದೆ.

2014-15 ರಲ್ಲಿ ಇದುವರೆಗೂ ಒಟ್ಟು 4,400 ಕಳ್ಳ ಸಾಗಾಣಿಕೆ ಪ್ರಕರಣಗಳು ಪತ್ತೆಯಾಗಿದ್ದು, 4,480 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಣಿಕೆದಾರರಿಂದ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 252 ಮಂದಿಯನ್ನು ಬಂಧಿಸಲಾಗಿದ್ದು, ವಶಪಡಿಸಿಕೊಂಡ ಚಿನ್ನದ ಮೊತ್ತ ಬರೋಬ್ಬರಿ 1,120 ಕೋಟಿ ರೂಪಾಯಿಗಳಾಗಿದೆ. 2012-13 ರಲ್ಲಿ 870 ಪ್ರಕರಣಗಳು ಪತ್ತೆಯಾಗಿದ್ದು, 100 ಕೋಟಿ ರೂ. ಮೊತ್ತದ 400 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. 2013-14 ರಲ್ಲಿ 2,700 ಪ್ರಕರಣ ಪತ್ತೆಯಾಗಿದ್ದು, 690 ಕೋಟಿ ರೂ. ಮೊತ್ತದ 2,760 ಕೆ.ಜಿ. ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈಗ ಕಳ್ಳ ಸಾಗಾಣಿಕೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದ್ದು, ಕಳ್ಳ ಸಾಗಾಣಿಕೆದಾರರು ಚಿನ್ನ ತರಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿರುವುದು ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Write A Comment