ರಾಷ್ಟ್ರೀಯ

ಮ್ಯಾಗಿ ನಂತರ ಈಗ ಕಾಂಪ್ಲಾನ್‌ಗೆ ಗ್ರಹಚಾರ; ಕಾಂಪ್ಲಾನ್ ಪ್ಯಾಕ್‍ನಲ್ಲಿ ಸತ್ತಿರುವ ಹುಳಗಳು

Pinterest LinkedIn Tumblr

Complan

ನವದೆಹಲಿ ಜೂ,14: ಮ್ಯಾಗಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮ್ಯಾಗಿ ಮರಾಟ ನಿಷೇಧಿಸಿದ ಬೆನ್ನಲ್ಲೇ ಇದೀಗ ಕಾಂಪ್ಲಾನ್ ಪ್ಯಾಕ್‍ನಲ್ಲಿ ಸತ್ತಿರುವ ಹುಳಗಳು ಲಕ್ನೋದಲ್ಲಿ ಪತ್ತೆಯಾಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕಾಂಪ್ಲಾನ್ ಎನರ್ಜಿ ಡ್ರಿಂಕ್‍ನಲ್ಲಿ ಹಾಗು ಪ್ಯಾಕ್‍ನಲ್ಲಿ ನೂರಾರು ಸತ್ತ ಹುಳಗಳು ಪತ್ತೆಯಾಗಿವೆ.ಈಗಾಗಿ ಕಾಂಪ್ಲಾನ್ ಪ್ಯಾಕ್ ಮೇಲೂ ನಿಷೇಧದ ಬೀತಿ ಎದುರಾಗಿದೆ.

ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹೆಚ್ಚಿನ ಪರೀಕ್ಷಗೆ ಕಾಂಪ್ಲಾಣ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಮಹಾನಗರ ನಿವಾಸಿ ತನಿಶಾ ರೈ ಅವರು ತಂದಿದ್ದ ಕಾಂಪ್ಲಾನ್ ಪ್ಯಾಕ್‍ನಲ್ಲಿ ನೂರಾರು ಸತ್ತ ಹುಳಗಳು ಪತ್ತೆಯಾಗಿದ್ದವು.ಈ ಬಗ್ಗೆ ಅವರು ದೂರು ಸಲ್ಲಿಸಿದ್ದರು.

ದೂರು ಸ್ವೀಕರಿಸಿದ ಪೋಲಿಸರು ಹೆಚ್ಚಿನ ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ಅನುವಾಗಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಕಾಂಪ್ಲಾನ್ ಪ್ಯಾಕ್‍ನಲ್ಲಿ ಹುಳಗಳನ್ನು ನೋಡಿ ಹೆದರಿಕೆಯಾಯಿತು.ಮ್ಯಾಗಿಯಲ್ಲಿ ವಿಷಕಾರಕ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಅದನ್ನು ತಿನ್ನುವುದನ್ನು ನಿಲ್ಲಿಸಿದ್ದೇವೆ.ಈಗ ಕಾಂಪ್ಲಾನ್ ಕೂಡ ನಿಲ್ಲಿಸಿದ್ದೇವೆ ಎಂದು ತನಿಶಾ ರೈ ಹೇಳಿದ್ದಾರೆ.

Write A Comment