ರಾಷ್ಟ್ರೀಯ

ವಿಶ್ವವಿಖ್ಯಾತ ರಾಕ್ ಗಾರ್ಡನ್ ಜನಕ ನೆಕ್‌ಚಂದ್ ಇನ್ನಿಲ್ಲ

Pinterest LinkedIn Tumblr

Roack-Garden

ಚಂಡೀಗಢ, ಜೂ.12- ವಿಶ್ವವಿಖ್ಯಾತ ರಾಕ್‌ಗಾರ್ಡನ್ ಜನಕ ನೆಕ್ ಚಂದ್ ಅವರು ನಿನ್ನೆ ಮಧ್ಯರತ್ರಿ ತಮ್ಮ 90ನೆ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಈಗ ಪಾಕಿಸ್ಥಾನಕ್ಕೆ ಸೇರಿರುವ ಹಳ್ಳಿಯೊಂದರಲ್ಲಿ ಹುಟ್ಟಿದ ನೆಕ್‌ಚಂದ್, ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೆಕ್‌ಚಂದ್ ಅವರ 90ನೇ ಜನ್ಮದಿನವನ್ನು

ಚಂಡೀಗಢದಲ್ಲಿ ಸರ್ಕಾರವೇ ಕಳೆದ ಡಿ.15 ರಂದು ಆಚರಿಸಿತ್ತು. ರಾಜಧಾನಿ ಚಂಡೀಗಢ ನಗರದ ಸೂಬೂರು 40 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಸ್ತುಗಳನ್ನು ಬಳಸಿ ನೆಕ್‌ಚಂದ್ರ ಸೃಷ್ಠಿಸಿದ್ದು ರಾಕ್ ಗಾರ್ಡನ್ ಇಡೀ ವಿಶ್ವದ ಗಮನ ಸೆಳೆದಿದೆ. ಈಗ ಇದೊಂದು ಪ್ರವಾಸಿ ತಣವೇ ಆಗಿದೆ. 1976ರಲ್ಲಿ ಈ ಉದ್ಯಾನ ಉದ್ಘಾಟನೆಯಾಗಿತ್ತು. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ರಾಕ್ ಗಾರ್ಡನ್‌ನಲ್ಲಿಡಲಾಗಿತ್ತು. ಮಧ್ಯಾಹ್ನದ ನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Write A Comment