ರಾಷ್ಟ್ರೀಯ

ಮತ್ತೆ ಏರಿದ ಚಿನ್ನದ ದರ

Pinterest LinkedIn Tumblr

1735gold1_400

ಇತ್ತೀಚೆಗಷ್ಟೇ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನದ ದರ ಬುಧವಾರದ ಚಿನಿವಾರ ಪೇಟೆಯಲ್ಲಿ ಏರಿಕೆ ಕಂಡಿದ್ದು ಮತ್ತಷ್ಟು ಚಿನ್ನ ದುಬಾರಿಯಾಗುವ ಸಾಧ್ಯತೆ ಇದೆ.

ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸತತ 3ನೇ ದಿನ ಚಿನ್ನದ ಧಾರಣೆ 100 ರೂ.ನಷ್ಟು ಏರಿಕೆ ಕಂಡಿತು. ಅಲ್ಲದೇ ಬುಧವಾರದ ಚಿನಿವಾರ ಪೇಟೆಯ ವಹಿವಾಟು ಮುಕ್ತಾಯದ ವೇಳೆಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 27,150 ರೂ.ನಷ್ಟು ದಾಖಲಾಗುವ ಮೂಲಕ ಹೂಡಿಕೆದಾರರಲ್ಲಿ ಸಂತಸ ಮೂಡಿಸಿತು. ಈ ನಡುವೆ ಬೆಳ್ಳಿ ಯೂ ಸಹ 500 ರೂ.ನಷ್ಟು ಏರಿಕೆ ಕಂಡು ಪ್ರತಿ ಕೆಜಿಗೆ 37,800 ರೂ.ಗಳಿಗೆ ಏರಿತು.

ವಿಶೇಷವೆಂದರೆ ಚಿನ್ನದ ಧಾರಣೆ ಇಳಿಕೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಈ ನಡುವೆ ಬಂಗಾರದ ದರ ಏರಿರುವುದು ಸಾಮಾನ್ಯ ಗ್ರಾಹಕರಿಗೆ ನಿರಾಸೆ ಮೂಡಿಸಿದೆ.

Write A Comment