ರಾಷ್ಟ್ರೀಯ

ಸೇಡಿಗಾಗಿ ಮೂವರ ಮೇಲೆ ಗ್ಯಾಂಗ್ ರೇಪ್ !!

Pinterest LinkedIn Tumblr

2930Rape-3

ಇಬ್ಬರು ಬಾಲಕಿಯರು ಹಾಗೂ ಒಬ್ಬ ಮಹಿಳೆಯ ಮೇಲೆ ಸಮುದಾಯವೊಂದರ ಮೇಲೆ ದ್ವೇಷ ಸಾಧನೆಗಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಭೀಕರ ಘಟನೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

ಇಲ್ಲಿನ ಕಲಹೇರಾ ಗ್ರಾಮದಲ್ಲಿ ಬಹುಸಂಖ್ಯಾತರಾಗಿರುವ ಬಂಜಾರಾ ಸಮುದಾಯದ 8 ಜನರು  ಅಲ್ಪಸಂಖ್ಯಾತರಾಗಿರುವ ಧೋಬಿ ಸಮುದಾಯಕ್ಕೆ ಸೇರಿದ 35 ವರ್ಷದ ಮಹಿಳೆ ಮತ್ತು 15 ಮತ್ತು 13 ವರ್ಷದ ಬಾಲಕಿಯರನ್ನು ಬೀದಿಗೆ ಎಳೆತಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಧೋಬಿ ಸಮುದಾಯದ ವ್ಯಕ್ತಿಯೊಬ್ಬ ಬಂಜಾರಾ ಸಮುದಾಯದ ವಿವಾಹಿತ ಮಹಿಳೆಯ ಜತೆ ಆಕ್ಷೇಪಾರ್ಹ ಸ್ಥಿತಿಯಲ್ಲಿದುದನ್ನು ಕಂಡು ಆಕ್ರೋಶದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು ಈ ಸಮಯದಲ್ಲಿ ಅತ್ಯಾಚಾರ ನಡೆಯುವುದನ್ನು ತಪ್ಪಿಸಲು ಬಂದ ಗ್ರಾಮದ ಪುರುಷರಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಅತ್ಯಾಚಾರಕ್ಕೆ ಒಳಗಾದವರನ್ನು ಮೊರಾದಾಬಾದ್ ಮತ್ತು ಆಮ್ರೋಹಾದ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗಾಗಲೇ ಕೆಲವು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಉಳಿದವರ ಪತ್ತೆಗೆ ಮುಂದಾಗಿದ್ದಾರೆ.

Write A Comment