ರಾಷ್ಟ್ರೀಯ

ಕದ್ದ ಮಕ್ಕಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದ ಎನ್ ಜಿಒ; ಕೊನೆಗೊ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು

Pinterest LinkedIn Tumblr

babys

ನವದೆಹಲಿ: ಮಕ್ಕಳನ್ನು ಕದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಅಂತಾರರಾಜ್ಯ ಮಕ್ಕಳ ಕಳ್ಳರನ್ನು ಬಂಧಿಸಿರುವ ದೆಹಲಿ ಪೊಲೀಸರು 2 ತಿಂಗಳ ಮಗುವನ್ನು ರಕ್ಷಿಸಿದ್ದಾರೆ.

ದೆಹಲಿಯ ದ್ವಾರಕನಗರದ ಎನ್ ಜಿ ಒ ಅಡಿಯಲ್ಲಿ ಈ ಕಳ್ಳರ ಗ್ಯಾಂಗ್ ಕೆಲಸ ಮಾಡುತ್ತಿದೆ. ಈ ಎನ್ ಜಿಒ ಸರ್ಕಾರದಿಂದ ನೋಂದಣಿ ಮಾಡಿಸಿಕೊಳ್ಳದೇ ಅನಧಿಕೃತವಾದದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಈ ಸಂಬಂಧ ದೂರು ದಾಖಲಿಸಿದ್ದು, ನವಜಾತ ಶಿಶುಗಳನ್ನು ಕದ್ದು ಈ ಎನ್ ಜಿಒ ಅಕ್ರಮವಾಗಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ವಿನೋದ್ ಕುಮಾರ್, ಶಿಖಾ ಚೌಧರಿ, ಅನಿಲ್ ಪಾಂಡೆ ಎಂಬುವರನ್ನು ಬಂಧಿಸಿರುವ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಎರಡಿ ತಿಂಗಳ ನವಜಾತ ಶಿಶುವನ್ನು ದತ್ತು ನೀಡುವಾಗ ಇವರು ಸಿಕ್ಕಿಬಿದ್ದಿದ್ದಾರೆ. ಬಂಧಿತರ ಬಳಿ ನಕಲಿ ಮಕ್ಕಳ ಜನನ ಪ್ರಮಾಣ ಪತ್ರ ಹಾಗೂ ದಾಖಲೆಗಳು ಸಿಕ್ಕಿದ್ದು, ಕದ್ದ ಮಕ್ಕಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದಂಪತಿಗೆ ಗಂಡು ಮಗು ನೀಡುವುದಕ್ಕೆ ಮೊದಲು 4ಲಕ್ಷದ 20 ಸಾವಿರ ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದ ಎನ್ ಜಿಒ ನಂತರ 5.5 ಲಕ್ಷ ಹಣ ನೀಡುವಂತೆ ತಿಳಿಸಿತ್ತು. ಇದಾದ ನಂತರ ಎನ್ ಜಿ ಮೇಲೆ ದಾಳಿ ನಡೆಸಿದ ಪೊಲೀಸರ 20 ಮಕ್ಕಳನ್ನ ರಕ್ಷಿಸಿದ್ದಾರೆ. ಈ ಸಂಬಂಧ ದ್ವಾರಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರಿದಿದೆ.

Write A Comment