ಕರ್ನಾಟಕ

ಜನರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರು ಜನರ ಬಂಧನ

Pinterest LinkedIn Tumblr

ARREST

ಬೆಂಗಳೂರು, ಜೂ.10: ಸಾರ್ವಜನಿಕರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿ ಅವರಿಂದ ನಗದು, ಚಿನ್ನಾಭರಣ ದೋಚುತ್ತಿದ್ದ ಆರು ಮಂದಿ ದರೋಡೆಕೋರರನ್ನು ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು ಬಂಧಿತರಿಂದ ಒಂದು ಕಾರು, ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕೇಶ್ (32), ಅರುಣ್‌ಕುಮಾರ್ (30), ನರಸಿಂಹಮೂರ್ತಿ (28), ಕಿರಣ್‌ಕುಮಾರ್ (30), ನಾಗರಾಜ (36), ಬಸವರಾಜ(24) ಬಂಧಿತ ಆರೋಪಿಗಳು.

ಇತ್ತೀಚೆಗೆ ಆವಲಹಳ್ಳಿಯ ಗುಂಪೊಂದು ರಸ್ತೆ ಮಧ್ಯೆ ಸಂಚರಿಸುವ ವಾಹನ ಹಾಗೂ ಸಾರ್ವಜನಿಕರನ್ನು ಅಡ್ಡಗಟ್ಟಿ ಅವರ ಬಳಿ ಹಣ ಹಾಗೂ ಚಿನ್ನಾಭರಣ ದೋಚುತ್ತಿದ್ದ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕನ್ನ ಕಳವು ಯತ್ನ ಹಾಗೂ ಆವಲಹಳ್ಳಿಯ ಸಂಸ್ಥೆಯೊಂದರಲ್ಲಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗಪ್ರಸಾದ್ ಅವರ ಮನೆಯಲ್ಲಿ 7 ಲಕ್ಷ ಹಣವನ್ನು ಇಟ್ಟಿರುವ ಬಗ್ಗೆ ಮಾಹಿತಿ ಕೊರಿಯರ್ ನೆಪ ಹೇಳಿ ಮನೆಗೆ ಹೋಗಿ ಚಾಕು ತೋರಿಸಿ ನಗನಾಣ್ಯ ದೋಚಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ ಎಂದು ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Write A Comment