ರಾಷ್ಟ್ರೀಯ

‘ಮಿಸಾಳ್ ಪಾವ್’ಗೆ ವಿಶ್ವದ ಅತ್ಯಂತ ರುಚಿಕರ ಸಸ್ಯಹಾರಿ ಖಾದ್ಯದಲ್ಲಿ ಮೊದಲ ಸ್ಥಾನ

Pinterest LinkedIn Tumblr

misal3

ಲಂಡನ್ ನಲ್ಲಿ ನಡೆದ ರುಚಿಕರ ಖಾದ್ಯಗಳ ಸ್ಪರ್ಧೆಯಲ್ಲಿ ಸಸ್ಯಹಾರ ವಿಭಾಗದಲ್ಲಿ ಭಾರತದ ‘ಮಿಸಾಳ್ ಪಾವ್’ ಮೊದಲ ಸ್ಥಾನ ಪಡೆಯುವ ಮೂಲಕ ವಿಶ್ವದ ಅತ್ಯಂತ ರುಚಿಕರ ಸಸ್ಯಹಾರಿ ಖಾದ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬೀನ್ಸ್, ಅಲೂಗಡ್ಡೆ, ನೀರುಳ್ಳಿ, ಬಟಾಣಿ ಮೊದಲಾದವನ್ನು ಬಳಸಿ ತಯಾರಿಸುವ ಮಸಾಲೆಯನ್ನು ಬ್ರೆಡ್ ಜೊತೆ ಉಪಹಾರವಾಗಿ ಸೇವಿಸುವ ಪದ್ದತಿ ಮಹಾರಾಷ್ಟ್ರದಲ್ಲಿ ಸಾಮಾನ್ಯವಾಗಿದ್ದು, ಮುಂಬೈನ ದಾದರಿನಲ್ಲಿರುವ ‘ಅಸ್ವಾದ್ ರೆಸ್ಟೋರೆಂಟ್’ ಬಾಣಸಿಗರು ತಯಾರಿಸಿದ್ದ ಮಿಸಾಳ್ ಪಾವ್ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವ ಮೂಲಕ ಮೊದಲ ಸ್ಥಾನ ಪಡೆದಿದೆ.

ಮುಂಬೈನಲ್ಲಿ ಇದನ್ನು ಮಿಸಾಳ್ ಪಾವ್ ಎಂದು ಕರೆದರೆ, ಪುಣೆಯಲ್ಲಿ ಪುನೇರಿ ಪಾವ್ ಎನ್ನುತ್ತಾರೆ. ಹೀಗೆ ಮಹಾರಾಷ್ಟ್ರದ ಆಯಾ ಪ್ರಾಂತ್ಯಗಳ ಹೆಸರಿನಿಂದಲೇ ಕರೆಯಲ್ಪಡುವ ಇದು ಇಂದು ದೇಶದ ಇತರೆ ಭಾಗಗಳಲ್ಲೂ ಜನಪ್ರಿಯಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಿಸಾಳ್ ಪಾವ್ ಹಾಗೂ ವಡಾ ಪಾವ್ ಶಾಪ್ ಗಳು ತಲೆಯೆತ್ತಿದ್ದು ಈ ರುಚಿಕರ ಖಾದ್ಯವನ್ನು ಮಾರಾಟ ಮಾಡುತ್ತಿದ್ದಾರೆ.

Write A Comment