ರಾಷ್ಟ್ರೀಯ

ಕಣ್ಮರೆಯಾದ ಹೆಲಿಕಾಪ್ಟರ್ ಬಂಗಾಳ ಕೊಲ್ಲಿಯಲ್ಲಿ ಪತನ !

Pinterest LinkedIn Tumblr

EXERCISE OF  INDIAN COAST GUARD REGION (EAST) CHENNAI

ಚೆನ್ನೈ, ಜೂ.9: ಮೂರು ಜನ ಚಾಲಕ ಸಿಬ್ಬಂದಿಯನ್ನು ಹೊತ್ತು ಹೊರಟ್ಟಿದ್ದ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್‌ ಬಂಗಾಳಕೊಲ್ಲಿಯಲ್ಲಿ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಸಿಬ್ಬಂದಿಯನ್ನು ಹೊತ್ತು ಚೆನ್ನೈನಿಂದ ಪುದುಚೇರಿಯತ್ತ ಹೊರಟಿದ್ದ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ನಿನ್ನೆ ರಾತ್ರಿಯಿಂದ ಚೆನ್ನೈನ ಕಂಬಳಿಯಲ್ಲಿ ಕಣ್ಮರೆಯಾಗಿತ್ತು.

ನಿನ್ನೆ ರಾತ್ರಿ 10.30ರ ಸುಮಾರಿನಲ್ಲಿ ತನ್ನ ಸಂಪರ್ಕ ಕಳೆದುಕೊಂಡು ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ಚೆನ್ನೈ ವಿಮಾನಯಾನ ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ 5.30ರ ವೇಳೆ ಚೆನ್ನೈನಿಂದ ಪುದುಚೇರಿಯತ್ತ ಹೊರಟಿದ್ದ ಚೆನ್ನೈ ಏರ್‌ವೇಸ್ ಹೆಲಿಕಾಪ್ಟರ್ ರಾತ್ರಿ 10ರ ವೇಳೆ ತಿರುಚಿನಾಪಳ್ಳಿ ಬಳಿ ತನ್ನ ಸಂಪರ್ಕ ಕಳೆದುಕೊಂಡಿತು.

ಕರಾವಳಿ ಗಸ್ತು ಪಡೆಗೆ ಸೇರಿದ್ದ ಏರ್‌ವೇಸ್ ಹೆಲಿಕಾಪ್ಟರ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ನಡೆಯುತ್ತಿದ್ದ ಭಾರತೀಯ `ಆಪರೇಷನ್ ಆಮ್ಲ ಅಭ್ಯಾಸ`ವನ್ನು ಕೂಡ ರದ್ದುಗೊಳಿಸಲಾಗಿದೆ.

ಚೆನ್ನೈನ ಏರ್‌ವೇಸ್‌ನಲ್ಲಿ ಆಪರೇಷನ್ ಆಮ್ಲ ಅಭ್ಯಾಸ ನಡೆಯುತ್ತಿದ್ದು, ರಾತ್ರಿಯಿಂದ ಸಂಪರ್ಕ ಕಳೆದುಕೊಂಡಿರುವ ಚೆನ್ನೈ ಏರ್‌ವೇಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಬಂಗಾಳಕೊಲ್ಲಿಯಲ್ಲಿ ಹಾಗೂ ಪುದುಚೇರಿ, ಕಡಲೂರು ವ್ಯಾಪ್ತಿಯಲ್ಲಿ ಭಾರತೀಯ ನೌಕಾಸೇನೆಯ ಒಂಭತ್ತು ಹಡಗುಗಳ ಶೋಧ ಕಾರ್ಯ ಕೈಗೊಂಡಿದೆ.

ಭಾರತೀಯ ನೌಕಾಪಡೆಯ ಒಂಭತ್ತು ಹಡಗುಗಳಲ್ಲಿ ಹಾಗೂ ಕರಾವಳಿ ಗಸ್ತು ಪಡೆಯ ಹಡಗುಗಳಲ್ಲಿ ಹೆಲಿಕಾಪ್ಟರ್ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಾಗಿದೆ.

Write A Comment