ಅಂತರಾಷ್ಟ್ರೀಯ

ಮೋದಿ ಶಾಕಾಹಾರ ಬಾಂಗ್ಲಾ ವ್ಯಥೆ!

Pinterest LinkedIn Tumblr

Modi-eating

ಢಾಕಾ, ಜೂ.8: ಪ್ರಧಾನಿ ನರೇಂದ್ರ ಮೋದಿಯ ಚೊಚ್ಚಲ ಬಾಂಗ್ಲಾದೇಶ ಪ್ರವಾಸದ ಎಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಿರುವ ಟಿವಿ ವಾಹಿನಿಗಳು ಈ ಸಂದರ್ಭದಲ್ಲಿ ಉಂಟಾಗಿರುವ ತುಸು ಬೇಸರವನ್ನುಂಟು ಮಾಡುವ ವಿಷಯವನ್ನೂ ಪ್ರಸ್ತಾಪಿಸಲು ಮರೆತಿಲ್ಲವೆನ್ನಬಹುದು.

ಬಾಂಗ್ಲಾದೇಶದ ವಿಶೇಷ ಮಾಂಸಾಹಾರಿ ಖಾದ್ಯಗಳ ರುಚಿಯನ್ನು ಆಸ್ವಾದಿಸಲು ಶಾಕಾಹಾರಿ ಮೋದಿಯವರಿಗೆ ಸಾಧ್ಯವಾಗದೆ ಹೋಯಿತು. ಮೋದಿಯವರ ಶಾಕಾಹಾರ ಸೇವನೆಯಿಂದಾಗಿ ಶನಿವಾರ ರಾತ್ರಿ ಢಾಕಾದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಔತಣ ಕೂಟದಲ್ಲಿ ರಾಷ್ಟ್ರದ ಯಾವುದೇ ವಿಶೇಷ ಖಾದ್ಯಗಳ ಸವಿಯುಣಿಸಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ಗುಜರಾತಿ ಖಮನ್‌ನಿಂದ ಪ್ರಾರಂಭಗೊಂಡ ಮೋದಿಯವರ ಭೋಜನವು ಟೊಮೊಟೊ ಸೂಪ್, ಪನೀರ್ ಬಟರ್ ಮಸಾಲ, ವೆಜಿಟೆಬಲ್ ಶಮ್ಮಿ ಕಬಾಬ್, ಪೊಟೊಲ್ ಡೋಲ್ಮಾ, ಬಗಾರ ಬೇಂಗನ್, ವೆಜಿಟೆಬಲ್ ಬಿರಿಯಾನಿ ಹಾಗೂ ಕಿಚಡಿಯನ್ನು ಒಳಗೊಂಡಿದ್ದು, ರಸಗುಲ್ಲಾ ಹಾಗೂ ಮಿಶ್ಟಿ ಡೋಯಿಯಿಂದ ಸಂಪನ್ನಗೊಂಡಿತು. ಮೀನನ್ನು ಸಸ್ಯಾಹಾರ ಎಂಬಂತೆ ಬಳಸಲಾಗುವ ಬಾಂಗ್ಲಾದಲ್ಲಿ ಕಡಲ ಏಡಿ, ಮಟನ್ ಅಥವಾ ಚಿಕನ್ ಇಲ್ಲದ ಊಟ ಅದು ಸಂಪೂರ್ಣವೆನಿಸದು. ಹೀಗಾಗಿ ಮೋದಿಯವರಿಗೆ ನೀಡಿರುವ ಔತಣವು ಎಷ್ಟಾದರೂ ಪೂರ್ಣವಲ್ಲ ಎಂಬ ಕೊರಗು ಬಾಂಗ್ಲಾದೇಶೀಯರದು ಎಂಬುದರಲ್ಲಿ ಅಚ್ಚರಿಯಿಲ್ಲ.

Write A Comment