ರಾಷ್ಟ್ರೀಯ

ಚುನಾವಣೆ ಹಿನ್ನೆಲೆ; ಬಿಹಾರ ಚುನಾವಣೆ ಹಿನ್ನಲೆ ರಾಹುಲ್-ನಿತೀಶ್ ಮಾತುಕತೆ

Pinterest LinkedIn Tumblr

rah

ನವದೆಹಲಿ,ಜೂ.7: ಸಮೀಪಿಸುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿಯಲ್ಲಿಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಕೂಡ ಇಂದು ರಾಹುಲ್‌ಗಾಂಧಿಯವರ ಭೇಟಿಗಾಗಿ ನಿನ್ನೆಯೇ ಇಲ್ಲಿಗೆ ಆಗಮಿಸಿದ್ದರು. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಸೆಣಸಲಿವೆ ಎಂದು ಜೆಡಿಯು ನಾಯಕ ಶರದ್ ಯಾದವ್ ನಿನ್ನೆ ಹೇಳಿಕೆ ನೀಡಿದ್ದರು. ಅಲ್ಲದೆ ಜೆಡಿಯು ಹಾಗೂ ಆರ್‌ಜೆಡಿ ನಡುವಣ ಭಿನ್ನಾಭಿಪ್ರಾಯಗಳನ್ನು ಮಾತುಕತೆಗಳ ಮೂಲಕ ಶೀಘ್ರವೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದೂ ಶರದ್ ಯಾದವ್ ಆಶಯ ವ್ಯಕ್ತಪಡಿಸಿದ್ದರು.

ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಿವಾರಣೆಯ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆಯಿಂದ ಸಭೆಯ ಮೇಲೆ ಸಭೆಗಳು ನಡೆಯುತ್ತಿವೆ. ಒಟ್ಟಾರೆ ರಾಹುಲ್, ನಿತೀಶ್ ನಡುವಣ ಮಾತುಕೆಗಳ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Write A Comment