ರಾಷ್ಟ್ರೀಯ

ಶುಭ ಸುದ್ದಿ; ಭಾರತದಲ್ಲಿ ಚಿನ್ನದ ದರ ಗಣನೀಯ ಕುಸಿತ ಕಾಣುವ ಸಾಧ್ಯತೆ

Pinterest LinkedIn Tumblr

gold

ಮುಂಬೈ: ಚಿನ್ನ ಪ್ರಿಯರಿಗೆ ಶುಭ ಸುದ್ದಿ. ಭಾರತೀಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಗಣನೀಯವಾಗಿ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ.

ಅಮೆರಿಕದ ಅರ್ಥವ್ಯವಸ್ಥೆ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಿಸುವ ಸುಳಿವು ನೀಡಿದೆ. ಹೀಗಾಗಿ ಚಿನ್ನದ ದರ ಸದ್ಯದಲ್ಲೇ ಕಡಿಮೆಯಾಗುವ ಸಾಧ್ಯತೆ ಇದೆ.

ಒಂದು ವೇಳೆ ಹೀಗಾದರೆ ಭಾರತದಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರ ರು.25,500 ರಿಂದ ರು. 20,500ರವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಹೇಳಿದೆ. ಸದ್ಯ ದೇಶದಲ್ಲಿ ಚಿನ್ನದ ದರ 10 ಗ್ರಾಂಗೆ ರು.27 ಸಾವಿರ ಇದೆ. ಅಮೆರಿಕದಲ್ಲಿ ಬಡ್ಡಿದರ ಹೆಚ್ಚಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಕುಸಿತ ಕಾಣಲಿದ್ದು, ಭಾರತದಲ್ಲಿ ಶೇ.24ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ.

2015-2016ನೇ ಹಣಕಾಸು ವರ್ಷದಲ್ಲಿ ಚಿನ್ನದ ರು.20,500ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು ಭಾರತೀಯ ಚಿನಿವಾರ ಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಭಾರತದಲ್ಲಿ ಚಿನ್ನದ ದರ ಗಣನೀಯ ಕುಸಿತ ಕಾಣುವ ಸಾಧ್ಯತೆ ಇದೆ.
ಪ್ರಸ್ತುತ ಅಮೆರಿಕ ಆರ್ಥಿಕ ಬಿಕ್ಕಟ್ಟಿನಿಂದ ಸುಧಾರಿಸಿಕೊಳ್ಳುತ್ತಿದ್ದು, ಅಮೆರಿಕದ ಫೆಡರಲ್ ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಏರಿಸುವ ಕುರಿತು ಚಿಂತನೆಯಲ್ಲಿ ತೊಡಗಿವೆ. ಇದು ಭಾರತೀಯ ಚಿನ್ನದ ಗ್ರಾಹಕರಿಗೆ ವರವಾಗಿ ಪರಿಣಮಿಸಿದೆ. ಒಂದು ವೇಳೆ ಅಮೆರಿಕ ಬಡ್ಡಿದರವನ್ನು ಏರಿಕೆ ಮಾಡಿದರೆ ಜಾಗತಿಕವಾಗಿ ಚಿನ್ನದ ದರ ಶೇ.10ರಿಂದ 25ರಷ್ಟು ಕುಸಿಯಲಿದೆ. ಪ್ರಸ್ತುತ ಭಾರತದಲ್ಲಿ ಚಿನ್ನದ ದರ ರು.27, 000 ಆಸುಪಾಸಿನಲ್ಲಿದ್ದು, ಅಮೆರಿಕ ಬಡ್ಡಿ ದರ ಏರಿಕೆ ಬಳಿಕ ರು.20,500ಕ್ಕೆಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಆರ್ಥಿಕ ಬೆಳವಣಿಗೆಯಲ್ಲಿನ ಏರಿಳಿತ ಹಾಗೂ ಮುಂಗಾರಿನ ಮೇಲೆ ಎಲ್ ನಿನೋ ಪರಿಣಾಮ ಆತಂಕದಿಂದಾಗಿ ಈಗಾಗಲೇ ಒತ್ತಡದಲ್ಲಿರುವ ಭಾರತೀಯ ಷೇರು ಹಾಗೂ ಕರೆನ್ಸಿ ಮಾರುಕಟ್ಟೆಗೆ ಈ ಬಡ್ಡಿದರ ಏರಿಕೆ ಮತ್ತಷ್ಟು ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ರುಪಾಯಿ ಎದುರು ಡಾಲರ್ ಬಲಗೊಳ್ಳುವ ಕಾರಣ ಕಮಾಡಿಟೀಸ್ ಮಾರುಕಟ್ಟೆಯ ಮೇಲೂ ಹೊಡೆತ ಬೀಳುವ ಸಾಧ್ಯತೆ ಇದೆ.

Write A Comment