ರಾಷ್ಟ್ರೀಯ

ಕುಡಿದು ಪೊಲೀಸರಿಗೆ ಆವಾಜ್ ಹಾಕಿದ ವೈದ್ಯೆ !

Pinterest LinkedIn Tumblr

3129safe_image

ಕುಡಿತ ಎಂಬುದಕ್ಕೆ ಯಾರು ಏನು ಎಂಬುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸೋಮವಾರ ರಾತ್ರಿ ಕಂಠ ಪೂರ್ತಿ ಕುಡಿದ ವೈದ್ಯೆಯೊಬ್ಬಳು ಡ್ರೈವಿಂಗ್  ಮಾಡುವಾಗ ಸಿಕ್ಕಿಬಿದ್ದು ಪೊಲೀಸರಿಗೆ ಅವಾಜ್  ಹಾಕಿದ ಘಟನೆ ನಡೆದಿದೆ.

ಹೈದ್ರಾಬಾದ್ ​​​​ನಲ್ಲಿ ವೀಕೆಂಡ್ ಮಸ್ತಿ ಯನ್ನು ಮುಗಿಸಿ ತನ್ನ ಇಬ್ಬರು ಬಾಯ್  ಇಬ್ಬರು ಬಾಯ್​​​ ಫ್ರೆಂಡ್ಸ್​​ ಜೊತೆ ಕುಡಿದು ಕಾರು ಚಲಾಯಿಸಿದ್ದ ಮಹಿಳಾ ಡಾಕ್ಟರ್​​​ ಮಂಜು ಎಂಬಾಕೆಯನ್ನು ಅನುಮಾನದಿಂದ ಪೊಲೀಸರು ತಡೆದು ನಿಲ್ಲಿಸಿದ್ದಾಳೆ.

ಈ ಸಮಯದಲ್ಲಿ ಫುಲ್​ ಟೈಟ್​ ಆಗಿದ್ದ ಲೇಡಿ ಡಾಕ್ಟರ್ ಬ್ರೀತ್​ ಪರೀಕ್ಷೆ ಮಾಡಲು ಬಂದ ಪೊಲೀಸರ ಜೊತೆಯೇ ರಂಪಾಟ ನಡೆಸಿದಳು. ಅಲ್ಲದೆ, ನಡುರಸ್ತೆಯಲ್ಲೇ ಕಾರು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದಳು. ಆದರೆ, ಕೊನೆಗೂ ಪರೀಕ್ಷೆಯಲ್ಲಿ ಲೇಡಿ ಡಾಕ್ಟರ್​ ಮದ್ಯ ಸೇವಿಸಿದ್ದು ದೃಢಪಟ್ಟಿದ್ದು,  ಜೂಬ್ಲಿಹಿಲ್ಸ್​ ಠಾಣೆಯಲ್ಲಿ ಡಾಕ್ಟರ್ ಮಂಜು ವಿರುದ್ಧ ಕೇಸ್​ ದಾಖಲಿಸಿ ದಂಡ ವಸೂಲಿಯನ್ನೂ ಮಾಡಿದ್ದಾರೆ.

Write A Comment