ರಾಷ್ಟ್ರೀಯ

ಸಂಘಟನೆಯ ಮಾನ್ಯತೆತಯನ್ನೇ ರದ್ದು : ಡಿವೈಎಫ್ಐ ಪ್ರತಿಭಟನೆ

Pinterest LinkedIn Tumblr

pro

ಚೆನ್ನೈ, ಮೇ 30-ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಕಾರಣಕ್ಕಾಗಿ ಸಂಘಟನೆಯ ಮಾನ್ಯತೆತಯನ್ನೇ ರದ್ದು ಮಾಡಿ, ನಿಷೇಧ ಹೇರಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವಿರುದ್ಧ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ಕಾರ್ಯಕರ್ತರು ಇಂದು ಇಲ್ಲಿನ ಐಐಟಿ ಮದ್ರಾಸ್ ಎದುರು ಭಾರೀ ಪ್ರತಿಭಟನೆ ನಡೆಸಿದರು.

ಸ್ಟೂಡೆಂಟ್ಸ್ ಯೂತ್ ಫ್ರಂಟ್ ಮತ್ತು ತಂಥೈ ಪೆರಿಯಾರ್ ಗ್ರೂಪ್ ಸೇರಿದಂತೆ ಇತರ ವಿದ್ಯಾರ್ಥಿ ಸಂಘಟನೆಗಳು ಡಿವೈಎಫ್‌ಐಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.

ಐಐಟಿ ಮದ್ರಾಸ್‌ನಲ್ಲಿ ಡಿವೈಎಫ್‌ಐ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ವೇಳೆ ಪ್ರಧಾನಿ ಮೋದಿ ಸರ್ಕಾರದ ಕೆಲವು ನೀತಿಗಳ ಬಗ್ಗೆ ಟೀಕಿಸಿದ್ದರು. ಇದರಿಂದಾಗಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಸಂಘಟನೆಯ ಮಾನ್ಯತೆ ರದ್ದು ಮಾಡಿದ್ದರು. ಇದಾದನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಸ್ಮೃತಿ ಇರಾನಿ ಕ್ರಮವನ್ನು ಟೀಕಿಸಿದ್ದರು.

ಈ ಸಂಬಂಧ ರಾಹುಲ್ ನಡುವೆ ಟ್ವೀಟರ್ ಮೂಲಕ ವಾಕ್ಸಮರವೇ ನಡೆಯಿತು. ಈ ವಾದ-ವಿವಾದಗಳ ಬಳಿಕ ಇಂದು ವಿವಿಧ ಸಂಘಟನೆಗಳು ಈ ಪ್ರತಿಭಟನೆ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರ ಈ ರೀತಿ ಹೋರಾಟಗಳನ್ನು ದಮನಿಸುವುದು ಸರ್ವಾಧಿಕಾರ ಧೋರಣೆಯಾಗಿದೆ. ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಈ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಅಪಾಯಕಾರಿ ಬೆಳವಣಿಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿವೈಎಫ್‌ಐ, ಎನ್‌ಎಸ್‌ಯುಐ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ನಿನ್ನೆ ಸಂಜೆ ಇರಾನಿ ನಿವಾಸದ ಬಳಿಯೂ ಪ್ರತಿಭಟನೆ ನಡೆಸಿದ್ದರು.

Write A Comment