ರಾಷ್ಟ್ರೀಯ

ಮಂಚಕ್ಕೆ ಕರೆದು ‘ಕೈಕೊಟ್ಟ’ ಯುವಕನಿಗೆ ಆಸಿಡ್ ಎರಚಿದ ಯುವತಿ !

Pinterest LinkedIn Tumblr

8214rape-medium

ತನ್ನೊಂದಿಗೆ ಕಾಮ ಕ್ರೀಡೆಯಾಡಿ ಕೈಕೊಟ್ಟ ಯುವಕನೊಬ್ಬನಿಗೆ ಯುವತಿಯೊಬ್ಬಳು ಆಸಿಡ್‌ ಎರಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ರಾಜ್‌ಕುಮಾರ್‌ ಪಾಲ್‌ ಎಂಬ ೨೦ ವರ್ಷದ ಯುವಕ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿದ್ದ. ಅಲ್ಲದೇ ಹೇಗಿದ್ದರೂ ನಿನ್ನನ್ನೇ ಮದುವೆಯಾಗುವುದು ಎಂದು ಆಕೆಯನ್ನು ನಂಬಿಸಿ ಹಾಸಿಗೆಗೆ ಕರೆದಿದ್ದ. ಹೀಗೆ ಇವರಿಬ್ಬರ ದೈಹಿಕ ಸಂಬಂಧ ಹಲವು ದಿನಗಳವರೆಗೆ ನಡೆದಿದ್ದು ನನ್ನನ್ನು ಮೊದಲು ಮದುವೆಯಾಗು ಎಂದು ಯುವತಿ ಹಠ ಹಿಡಿದಿದ್ದಾಳೆ. ಆದರೆ ಆಗ ಯೂ ಟರ್ನ್ ಹೊಡೆದ ಯುವಕ ನನ್ನೊಂದಿಗೆ ಸುಖ ಅನುಭವಿಸಿದಂತೆ ನೀನು ಮತ್ಯಾರ ಜತೆ ಮಲಗಿಲ್ಲ ಎನ್ನುವುದಕ್ಕೆ ಖಾತ್ರಿ ಏನು ಎಂದು ಪ್ರಶ್ನಿಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಯುವತಿ ಗುರುವಾರ ರಾತ್ರಿ ಆತನ ಮೇಲೆ ಆಸಿಡ್‌ ಎರಚಿ ಪರಾರಿಯಾಗಿದ್ದಾಳೆ .ಹುಡುಗಿಯಿಂದ ಆಸಿಡ್‌ ದಾಳಿಗೆ ಗುರಿಯಾಗಿ ಸುಟ್ಟ ಗಾಯಗಳಿಗೆ ಗುರಿಯಾಗಿರುವ ರಾಜ್‌ಕುಮಾರ್‌ ಪಾಲ್‌ನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವತಿಯ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment