ರಾಷ್ಟ್ರೀಯ

ಹೃದ್ರೋಗಿ ಬಾಲಕಿ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ; ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡುವಂತೆ ದಿಲ್ಲಿ ಸರಕಾರಕ್ಕೆ ಸೂಚನೆ

Pinterest LinkedIn Tumblr

girl -letterwrites-letter

ನವದೆಹಲಿ: ಪ್ರಧಾನಿ ಮೋದಿ 8 ವರ್ಷದ ಬಾಲಕಿಯ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಪ್ರಧಾನಿ ಕಾರ್ಯಾಲಯ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

ಆಗ್ರಾದಲ್ಲಿರುವ ತೈಯ್ಯಬಾ ಎನ್ನುವ 8 ವರ್ಷದ ಬಾಲಕಿ ಹುಟ್ಟಿದಂದಿನಿಂದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಈಕೆಯ ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಕಂಗಾಲಾಗಿದ್ದರು. ವಿವಿಧ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿದರೂ ಅವರು ಯಾರು ಇವರ ಸಹಾಯ ಬಾರದ ಕಾರಣ ಕಷ್ಟದಲ್ಲಿದ್ದರು.

ಒಂದು ದಿನ ವೇಳೆ ತೈಯ್ಯಬಾ ಟಿವಿಯಲ್ಲಿ ಪ್ರಧಾನಿ ಮೋದಿಯವರು ಎಲ್ಲರಿಗೂ ಸಹಾಯ ಮಾಡಿರುವ ಸುದ್ದಿಯನ್ನು ನೋಡುತ್ತಾಳೆ. ಭಾರತೀಯಳಾದ ನನಗೂ ಅವರಿಂದ ಸಹಾಯವನ್ನು ನಿರೀಕ್ಷಿಸುವ ಹಕ್ಕಿದೆ ಎಂದು ಪ್ರಧಾನಿ ಮೋದಿಯವರಿಗೆ ಆರ್ಥಿಕ ಸಹಾಯ ಕೋರಿ ಪತ್ರ ಬರೆಯುತ್ತಾಳೆ. ವೈದ್ಯರು ಶಸ್ತ್ರ ಚಿಕಿತ್ಸೆಗಾಗಿ ಸುಮಾರು 15ರಿಂದ 20 ಲಕ್ಷ ರೂಪಾಯಿ ವೆಚ್ಚವಾಗುತ್ತದೆಂದು ತಿಳಿಸಿದ್ದಾರೆ. 5 ಜನರಿರುವ ಕುಟುಂಬವನ್ನು ನಡೆಸುತ್ತಿರುವ ತಂದೆ ಓರ್ವ ಕೂಲಿ ಕಾರ್ಮಿಕನಾಗಿದ್ದಾರೆ. ಹೀಗಾಗಿ ನನ್ನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವಂತೆ ಪತ್ರದಲ್ಲಿ ಕೇಳಿಕೊಂಡಿದ್ದಾಳೆ.

ಆದರೆ 15-20 ದಿನ ಒಳಗಡೆ ಪ್ರಧಾನಿ ಕಾರ್ಯಾಲಯದಿಂದ ಚಿಕಿತ್ಸೆಗೆ ಸಂಬಂಧಿಸಿದಂತೆ ಮತ್ತಷ್ಟು ವಿವರ ನೀಡುವಂತೆ ತೈಯ್ಯಬಾಗೆ ಪತ್ರ ಬಂದಿದೆ. ಅಲ್ಲದೇ ದೆಹಲಿ ಸರ್ಕಾರಕ್ಕೆ ತೈಯ್ಯಬಾಳಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದೆ. ಸದ್ಯ ದೆಹಲಿಯ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Write A Comment