ರಾಷ್ಟ್ರೀಯ

ಸದ್ಯದಲ್ಲೇ ಗೂಗಲ್‌ನಿಂದ ಫೋಟೊ ಸರ್ವೀಸ್‌

Pinterest LinkedIn Tumblr

Google

ಹೊಸದಿಲ್ಲಿ: ಶೀಘ್ರದಲ್ಲೇ ಗೂಗಲ್‌ನ ಆನ್‌ಲೈನ್‌ ಚಿತ್ರ ವಿನಿಮಯ ಮತ್ತು ಸಂಗ್ರಹ ಸೇವೆ ಅನಾವರಣಗೊಳ್ಳುವ ನಿರೀಕ್ಷೆ ಇದೆ.

ಇದೇ ತಿಂಗಳು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆಯಲಿರುವ ಗೂಗಲ್ ಡೆವಲಪರ್ಸ್‌ ಸಮಾವೇಶದಲ್ಲಿ ಈ ಹೊಸ ಫೋಟೊ ಟೂಲ್‌ ಅನಾವರಣಗೊಳ್ಳುವ ನಿರೀಕ್ಷೆ ಇದೆ. ಆದರೆ, ಇದು ಗೂಗಲ್‌ ಪ್ಲಸ್‌ನ ಭಾಗವಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಗೂಗಲ್‌ ಪ್ಲಸ್‌ನ ಪ್ರಮುಖ ಎದುರಾಳಿ ಸಂಸ್ಥೆಗಳಾದ ಫೇಸ್‌ಬುಕ್‌ ಹಾಗೂ ಟ್ವಿಟರ್‌ಗೂ ಈ ಹೊಸ ಫೋಟೊ ಟೂಲ್‌ನಿಂದ ಚಿತ್ರಗಳನ್ನು ಪೋಸ್ಟ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸದ್ಯ ಗೂಗಲ್‌ ಪ್ಲಸ್‌ ಫೋಟೊ ಟೂಲ್‌ ಸೇವೆಯನ್ನು ಒದಗಿಸುತ್ತಿದ್ದು, ಅದರಿಂದ ನೇರವಾಗಿ ಗೂಗಲ್‌ನ ಸಾಮಾಜಿಕ ಜಾಲ ತಾಣಗಳಿಗೆ ಫೋಟೊ ಅಪ್‌ಲೋಡ್‌ ಮಾಡಬಹುದು. ಆದರೆ, ಗೂಗಲ್‌ ಪ್ಲಸ್‌ ಜನರಿಗೆ ಇನ್ನೂ ಹತ್ತಿರವಾಗದ ಕಾರಣ, ಫೇಸ್‌ಬುಕ್‌ನ ಇನ್ಸ್ಟಾಗ್ರಾಮ್‌ ಹಾಗೂ ಯಾಹೂನ ಫ್ಲಿಕರ್‌ಗೆ ಪೈಪೋಟಿ ಒಡ್ಡಲು ಪ್ರತ್ಯೇಕವಾದ ಫೋಟೊ ಸೇವೆ ಒದಗಿಸಲು ಕಂಪನಿ ಮುಂದಾಗಿದೆ.

Write A Comment