ರಾಷ್ಟ್ರೀಯ

ಕೇಜ್ರಿವಾಲ್ ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲೇನಿದೆ?

Pinterest LinkedIn Tumblr

kej

ನವದೆಹಲಿ: ದೆಹಲಿ ಆಡಳಿತದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪಕ್ಕೆ ಅಸಮಾಧಾನವನ್ನು ವ್ಯಕ್ತ ಪಡಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಜತೆಗಿನ ಆಪ್ ನಾಯಕನ ಹಗ್ಗ ಜಗ್ಗಾಟ ತಾರಕಕ್ಕೇರಿದ್ದು, ಅವರ ವಿರುದ್ಧ ಗರಂ ಆಗಿರುವ ಕೇಜ್ರಿವಾಲ್ ಪ್ರಧಾನಿಯವರಿಗೆ ಪತ್ರ ರವಾನಿಸಿದ್ದಾರೆ.

“ನಮ್ಮದು ಸಂವಿಧಾನದ ಪ್ರಕಾರ ಚುನಾಯಿತಗೊಂಡ ಸರ್ಕಾರ. ಆದರೆ ನಮ್ಮ ಆಡಳಿತದಲ್ಲಿ ನಿಮ್ಮ ಸರ್ಕಾರ ಉಪರಾಜ್ಯಪಾಲರ ಮೂಲಕ ಹಸ್ತಕ್ಷೇಪ ನಡೆಸುತ್ತಿದೆ.ಕೇಂದ್ರ ಸರ್ಕಾರದ ಈ ನಡೆ ಕಾನೂನು ಬಾಹಿರ”, ಎಂದು ಕೇಜ್ರಿವಾಲ್ ಕೆರಳಿ ನುಡಿದಿದ್ದಾರೆ.

“ದೆಹಲಿಯಲ್ಲಿ ಪ್ರಜಾಪ್ರಭುತ್ವದ ಸರ್ಕಾರವೇ ಅಸ್ತಿತ್ವದಲ್ಲಿದೆ. ಆದರೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಜನರಿಂದ ಆಯ್ಕೆಯಾದ ಆಪ್ ಸರ್ಕಾರಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ”, ಎಂದು ದೆಹಲಿ ಸಿಎಂ ನಿನ್ನೆ ಸಂಜೆಯೇ ಮೋದಿಯವರಿಗೆ ಪತ್ರ ಬರೆದಿದ್ದಾರೆ.

Write A Comment