ಕರ್ನಾಟಕ

ಜನತಾ ದರ್ಶನ: ಸ್ನೇಹಿತನಿಗೆ 10 ಸಾವಿರ ರೂ ನೀಡಿದ ಸಿಎಂ

Pinterest LinkedIn Tumblr

si

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಪರ್ಸ್‌ನಲ್ಲಿದ್ದ 10 ಸಾವಿರ ರೂ. ವೈಯಕ್ತಿಕ ಹಣವನ್ನು ತಮ್ಮ ಸ್ನೇಹಿತರ ಅನಾರೋಗ್ಯದ ವೆಚ್ಚಕ್ಕೆಂದು ನೀಡಿದ್ದು, ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು, ಇಂದು ಬೆಳ್ಳಂ ಬೆಳಗ್ಗೆ ನಗರದಲ್ಲಿ ಜನತಾ ದರ್ಶನ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ, ನಗರದ ಶಾರದಾದೇವಿ ನಗರಕ್ಕೆ ಪ್ರವೇಶ ನೀಡಿದರು. ಈ ವೇಳೆ ತಮ್ಮ ವೃಯಕ್ತಿಕ ಜೀವನದಲ್ಲಿ ಪರಿಚಯವಾಗಿದ್ದ ಬಹಳ ಹಿಂದಿನ ಸಂಬಂಧಿ, ಸ್ನೇಹಿತ ಮರಿಯಪ್ಪ ಅವರಿಗೆ ಸ್ವತಃ ತಮ್ಮ ಪರ್ಸ್‌ನಿಂದಲೇ 10 ಸಾವಿರ ಮೊತ್ತದ ಹಣವನ್ನು ತೆಗೆದು ಕೊಟ್ಟರು.

ಮಾಹಿತಿ ವಿವರ: ಸಿಎಂ ಸಿದ್ದರಾಮಯ್ಯ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಸ್ನೇಹಿತ ಮರಿಯಪ್ಪ ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಹಣದ ಅಗತ್ಯವಿದೆ ಸಹಾಯ ಮಾಡುತ್ತೀರಾ ಎಂದು ಬಹಿರಂಗವಾಗಿಯೇ ಸಹಾಯಕ್ಕೆ ಮನವಿ ಮಾಡಿಕೊಂಡರು. ಆದ್ದರಿಂದ ಖುದ್ದು ತಮ್ಮ ಜೇಬಿನಲ್ಲಿದ್ದ ಹಣವನ್ನು ತೆಗೆದ ಸಿಎಂ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಗೌಡ ಅವರಿಗೆ ನೀಡಿ ಮರಿಯಪ್ಪನಿಗೆ ತಲುಪಿಸುವಂತೆ ಸೂಚಿಸಿದರು. ಈ ಮೂಲಕ ಸಿಎಂ ಮಾನವೀಯತೆ ಮೆರೆದಿದ್ದಾರೆ.

ಸಿಎಂ ಹಾಗೂ ಮರಿಯಪ್ಪ ಅವರಿಗೆ ಬಹಳ ವರ್ಷಗಳಿಂದ ಪರಿಚಯವಿದ್ದು ಸ್ನೇಹಿತರಾಗಿದ್ದಾರೆ. ಇನ್ನು ಮರಿಯಪ್ಪ ನಾಟಕ ಕಲಾವಿದರಾಗಿದ್ದು, ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಾರ್ವಜನಿಕರ ದರ್ಶನ ಸಂದರ್ಭದಲ್ಲಿ ಬಹಿರಂಗವಾಗಿ ಸಹಾಯ ಕೇಳಿದ್ದಾರೆ.

Write A Comment