ಅಂತರಾಷ್ಟ್ರೀಯ

ಭಾರತೀಯ ಮೂಲದ ‘ಚಿಕನ್‌ಕಿಂಗ್’ಗೆ ಅಗ್ರಸ್ಥಾನಬ್ರಿಟನ್‌ನ ‘ಪ್ರಾದೇಶಿಕ ಏಶ್ಯನ್ ಶ್ರೀಮಂತರ ಪಟ್ಟಿ’

Pinterest LinkedIn Tumblr

ranjith

ಲಂಡನ್, ಮೇ 19: ಬ್ರಿಟನ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಕೋಳಿ ಸಾಕಣೆ ಉದ್ಯಮವನ್ನು ನಡೆಸುತ್ತಿರುವ ‘ಚಿಕನ್ ಕಿಂಗ್’ ಎಂದೇ ಜನಪ್ರಿಯರಾಗಿರುವ ರಂಜಿತ್ ಬೋಪಾರನ್ ಈ ವರ್ಷದ ಶ್ರೀಮಂತ ಏಶ್ಯನ್ನರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಸತತ ಎರಡನೆ ಬಾರಿ ಈ ಸ್ಥಾನವನ್ನು ಪಡೆದಿರುವ ರಂಜಿತ್ ಬೋಪಾರನ್ ‘2 ಸಿಸ್ಟರ್ಸ್‌ ಗ್ರೂಪ್’ ಆಹಾರೋದ್ಯಮ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಅವರು ಸುಮಾರು 1.35 ಶತಕೋಟಿ ಪೌಂಡ್ ಆಸ್ತಿ ಹೊಂದಿರುವುದಾಗಿ ಅಂದಾಜಿಸಲಾಗಿದ್ದು, 2014ರ ಅವಯಲ್ಲಿ ಅದು 50 ದಶಲಕ್ಷ ಪೌಂಡ್‌ಗಳಷ್ಟು ಏರಿಕೆ ಕಂಡಿದೆ ಎಂದು ‘ಏಶ್ಯನ್ ಮೀಡಿಯಾ ಆ್ಯಂಡ್ ಮಾರ್ಕೆಟಿಂಗ್ ಗ್ರೂಪ್’(ಎಎಂಜಿ) ತನ್ನ ವರದಿಯಲ್ಲಿ ಪ್ರಕಟಿಸಿದೆ.

ಪ್ರಮುಖ ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಹಾಗೂ ಅವರ ಪುತ್ರ ಅಂಗದ್‌ರ ‘ಕಪಾರೊ ಗ್ರೂಪ್’ ಉತ್ತರ ಲಂಡನ್‌ನ ಮಿಡ್‌ಲ್ಯಾಂಡ್‌ನಲ್ಲಿ ಗಣನೀಯ ವಹಿವಾಟು ನಡೆಸಿದ್ದು 725 ದಶಲಕ್ಷ ಪೌಂಡ್ ಅಂದಾಜು ಆಸ್ತಿಯೊಂದಿಗೆ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ.

ಈ ಸಾಲಿನ ಪಟ್ಟಿಯ ಮೊದಲ ಐವರಲ್ಲಿ ವೇದಾಂತ ರಿಸೋರ್ಸಸ್ ಸ್ಥಾಪಕಾಧ್ಯಕ್ಷ ಅನಿಲ್ ಅಗರ್ವಾಲ್(370 ದಶಲಕ್ಷ ಪೌಂಡ್), ಕ್ರೌನ್ ಕ್ರೆಸ್ಟ್ ಗ್ರೂಪ್‌ನ ಅಬ್ದುಲ್ ರಶೀದ್ ಹಾಗೂ ಅಝೀಝ್ ತಯೂಬ್(200 ದಶಲಕ್ಷ ಪೌಂಡ್), ಉತ್ಪಾದನಾ ಸಮೂಹ ಎಲ್‌ಪಿಸಿಯ ಶಿರಾಝ್ ತೇಜಾನಿ(150 ದಶಲಕ್ಷ ಪೌಂಡ್) ಒಳಗೊಂಡಿದ್ದಾರೆ.

Write A Comment