ರಾಷ್ಟ್ರೀಯ

ಕಪ್ಪು ಹಣ ವಾಪಸಿಗೆ ಕೇಂದ್ರ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ : ಜೇಠ್ಮಲಾನಿ

Pinterest LinkedIn Tumblr

ramjetmalaniaiai

ನವದೆಹಲಿ, ಮೇ 13: ವಿದೇಶಿ ಬ್ಯಾಂಕ್‍ಗಳಲ್ಲಿರುವ ಭಾರೀ ಮೊತ್ತದ ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವುದಾಗಿ ಹೇಳುತ್ತಿದ್ದರೂ ಕೇಂದ್ರ ಸರ್ಕಾರ ಹಾಗೂ ಅದರ ಅಧಿಕಾರಿಗಳು ಇದುವರೆಗೂ ಯಾವುದೇ ಪರಿಣಾಮಕಾರಿ ಕ್ರಮಗಳನ್ನೂ ತೆಗೆದುಕೊಂಡಿಲ್ಲ ಎಂದು ಹಿರಿಯ ನ್ಯಾಯವಾದಿ ರಾಮ್‍ಜೇಠ್ಮಲಾನಿ ಇಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇಡೀ ದೇಶದಲ್ಲೇ ಭಾರೀ ವಂಚನೆ ಪ್ರಕರಣ ಎನ್ನಲಾಗಿರುವ ಕಪ್ಪು ಹಣದ ವಾಪಸಾತಿ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ನಡೆದಿರುವ ಪ್ರಕ್ರಿಯೆಗಳ ಬಗ್ಗೆ, ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಮತ್ತು ನ್ಯಾಯಮೂರ್ತಿ ಎ.ಕೆ.ಶಿಖ್ರಿ ಅವರನ್ನೊಳಗೊಂಡ ಪೀಠಕ್ಕೆ ಮಾಹಿತಿ ನೀಡಿದ ಖ್ಯಾತ ನ್ಯಾಯವಾದಿ ಜೇಠ್ಮಲಾನಿ, ವಿದೇಶಿ ಬ್ಯಾಂಕಗಳಲ್ಲಿರುವ ಭಾರತದ ಲಕ್ಷಾಂತರ ಕೋಟಿ ರೂ. ಕಪ್ಪು ಹಣ (ತೆರಿಗೆ ವಂಚಿತ)ವನ್ನು ಮರಳಿ ತರಲು ಈಗಿನ ಸರ್ಕಾರ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಗಳನ್ನೂ ಇದುವರೆಗೆ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾಗೆಯೇ ಪ್ರಾಮಾಣಿಕ ವರ್ತಕರನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರಕ್ಕೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜೇಠ್ಮಲಾನಿ ನ್ಯಾಯಾಲಯಕ್ಕೆ ಮನವಿ ಮಾಡಿದರು.ವಿದೇಶಿ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿರುವ ಭಾರೀ ಪ್ರಮಾಣದ ಹಣವನ್ನು ಮರಳಿ ಸ್ವದೇಶಕ್ಕೆ ತರುವ ಎಲ್ಲ ಪ್ರಯತ್ನಗಳಿಗೂ ಪ್ರತಿರೋಧ ಒಡ್ಡುತ್ತಿರುವ ಈ ಹಿಂದಿನ ಯುಪಿಎ ಸರ್ಕಾರಕ್ಕೆ ನಿಷ್ಠರಾಗಿರುವ ರಾಜಕಾರಣಿಗಳು, ಅಧಿಕಾರಿಗಳೇ ತುಂಬಿರುವ ಪ್ರಸಕ್ತ ಎನ್‍ಡಿಎ ಸರ್ಕಾರದಿಂದ ಕಪ್ಪು ಹಣ ವಾಪಸಾತಿ ಕಾರ್ಯ ಅಸಾಧ್ಯ ಎಂದು ನನ್ನ ಅಂತರಾತ್ಮ ಹೇಳುತ್ತಿದೆ ಎಂದು ರಾಮ್ ಜೇಠ್ಮಲಾನಿ ಸಾಂವಿಧಾನಿಕ ಪೀಠದೆದುರು ನಿವೇದಿಸಿದರು. ಈ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನೂ ವಿನಿಮಯ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಯಾವುದೇ ಸೂಕ್ತ ಕ್ರಮ ಅನುಸರಿಸಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಸಂದರ್ಭ ಸಾರ್ವಜನಿಕವಾಗಿ ಘೋಷಿಸಿದ್ದ ಕಪ್ಪು ಹಣ ವಾಪಸಾತಿ ವಿಚಾರದ ಬಗ್ಗೆ ಹೇಳುವುದಾದರೆ, ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಹೇಳಿರುವಂತೆ ಅದು ಕೇವಲ ಚುನಾವಿ ಜುಮ್ಲಾ (ಪೆÇಳ್ಳು ಭರವಸೆ)ಯಾಗಿಯೇ ಉಳಿದಿದೆ. ಇತ್ತೀಚೆಗೆ ಅಮಿತ್ ಷಾ ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದ ಈ ಹೇಳಿಕೆಯನ್ನು ಅವರೇ ಆಗಲಿ ಅಥವಾ ಇನ್ನಾರೇ ಆಗಲಿ ಅಲ್ಲಗಳೆಯುವಂತಿಲ್ಲ.

ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಪೆÇ್ರ.ಆರ್.ವೈದ್ಯನಾಥನ್ ಅವರು ನೀಡಿರುವ ಲೆಕ್ಕದ ಪ್ರಕಾರ ವಿದೇಶಿ ಬ್ಯಾಂಕ್‍ಗಳಲ್ಲಿ 1.4 ಲಕ್ಷ ಡಾಲರ್ ಅಥವಾ ಸುಮಾರು 70 ಲಕ್ಷ ಕೋಟಿ ರೂ.ಗಳಷ್ಟು ಭಾರತದ ಹಣ ಕೊಳೆಯುತ್ತಿದೆ ಎಂದು ಜೇಠ್ಮಲಾನಿ ನ್ಯಾಯಾಲಯಕ್ಕೆ ಮಾಹಿತಿ ನೀಡಿಸದರು. ದೇಶದ ಖ್ಯಾತ ನ್ಯಾಯವಾದಿ ರಾಮ್‍ಜೇಠ್ಮಲಾನಿ ಅವರು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಇದಕ್ಕಾಗಿ ವಿಶೇಷ ತನಿಕಾ (ಎಸ್‍ಐಟಿ) ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Write A Comment