ರಾಷ್ಟ್ರೀಯ

ಫೇಸ್‌ಬುಕ್ ಕ್ರೈಮ್: ಮಕ್ಕಳ ಅಶ್ಲೀಲ ಪೋಸ್ಟ್ ಮಾಡುತ್ತಿದ್ದವನ ಬಂಧನ

Pinterest LinkedIn Tumblr

chi

ತಿರುಪತಿ: ಫೇಸ್‌ಬುಕ್‌ನಲ್ಲಿ ಮಕ್ಕಳ ಕುರಿತು ಅಶ್ಲೀಲ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದ ವ್ಯಕ್ತಿಯೊಬ್ಬ ಆಂಧ್ರಪ್ರದೇಶದ ತಿರುಪತಿಯಲ್ಲಿ  ಪೊಲೀಸರ ಅತಿಥಿಯಾಗಿದ್ದಾನೆ.

27 ವರ್ಷದ ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಕಮ್ಯುನಿಟಿಗಳನ್ನು ಪ್ರಾರಂಭಿಸಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದ. ತನ್ನ ಫೇಸ್‌ಬುಕ್ ಪೇಜ್‌ನಲ್ಲಾತ ಅಪ್ರಾಪ್ತ ಹೆಣ್ಣುಮಕ್ಕಳ ವಿಲಕ್ಷಣ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಮತ್ತು ಅದರಡಿ ಅಸಭ್ಯ ಕಮೆಂಟ್‌ಗಳನ್ನು ನಮೂದಿಸುತ್ತಿದ್ದ. ಆತನ ವಿರುದ್ಧ ಅನೇಕ ದೂರುಗಳು ದಾಖಲಾಗಿದ್ದವು.

ಮತ್ತೂ ಆಘಾತಕಾರಿ ಸಂಗತಿಯೆಂದರೆ ಆತನ ಈ ಕಮ್ಯುನಿಟಿಗೆ 3,000ಕ್ಕಿಂತ ಹೆಚ್ಚು ಫಾಲೋವರ್ಸ್ ಇದ್ದರು. ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಆತನ ಫೇಸ್‌ಬುಕ್ ಪೇಜ್‌ನ್ನು ಬ್ಲಾಕ್ ಮಾಡಲಾಗಿತ್ತು.

ಆರೋಪಿಯ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Write A Comment