ಅಂತರಾಷ್ಟ್ರೀಯ

ಭೂಕಂಪ ಸಂತ್ರಸ್ತರಿಗಾಗಿ 17.4 ಲಕ್ಷ ಸಂಗ್ರಹಿಸಿದ 8ರ ಬಾಲಕ

Pinterest LinkedIn Tumblr

nepa

ವಾಷಿಂಗ್ಟನ್: ನೇಪಾಳ ಮೂಲದ ಅಮೇರಿಕನ್ ನಿವಾಸಿ ಪುಟ್ಟ ಬಾಲಕನೊಬ್ಬ ಭೂಕಂಪ ಸಂತ್ರಸ್ತರಿಗಾಗಿ 17.4 ಲಕ್ಷ ರೂಪಾಯಿ ಸಂಗ್ರಹಿಸಿ ಮಾನವೀಯತೆಯನ್ನು ಮೆರೆದಿದ್ದಾನೆ.

8 ವರ್ಷದ ನೀವ್ ಸರಾಫ್ ಪೋಷಕರು ನೇಪಾಳ ಮೂಲದವರಾಗಿದ್ದು, ತನ್ನ ದೇಶದಲ್ಲಿ ಪ್ರಕೃತಿ ವಿಕೋಪದಿಂದಾದ ಅನಾಹುತದ ಕುರಿತು ದೂರದರ್ಶನ ವೀಕ್ಷಿಸಿ, ಅಪ್ಪ ಅಮ್ಮಂದಿರಿಂದ ಕೇಳಿ ತಿಳಿದುಕೊಂಡಿದ್ದ ಬಾಲಕನ ಮನ ಪೀಡಿತರಿಗಾಗಿ ಮಿಡಿದಿದೆ. ಅವರಿಗೆ ತಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿ ತಂದೆ ತಾಯಿಗಳ ಬಳಿ ಪಾಕೇಟ್ ಮನಿ ಕೇಳಿದ್ದಾನೆ. ಆದರೆ ಅವರು ನೀಡಿದ್ದ ಹಣ ಸಾಲದೆನಿಸಿ ಅಕ್ಕಪಕ್ಕದ ನಿವಾಸಿಗಳಲ್ಲಿ ಸಹಾಯ ಯಾಚಿಸಿದ್ದಾನೆ. ಹುಡುಗನ ಕಳಕಳಿಯನ್ನು ನೋಡಿದ ಪರಿಚಿತರೊಬ್ಬರು ‘ಕ್ರೌಡ್ ಫಂಡಿಂಗ್’ ಎಂಬ ವೈಬ್‌ಸೈಟ್ ರಚಿಸಿ ಕೊಟ್ಟು ಬಾಲಕನ ಕಾರ್ಯದಲ್ಲಿ ನೆರವಾಗಿದ್ದಾರೆ

ಇದರ ಪರಿಣಾಮವಾಗಿ ಹಣದ ಹೊಳೆ ಹರಿದು ಬಂದಿದ್ದು ಬಾಲಕನ ಬಳಿ ಈಗ 27,276 ಡಾಲರ್ ಅಂದರೆ ಸುಮಾರು 17.4 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ತನ್ನ ಮಗನ ಈ ವಿಶಾಲ ಮನೋಭಾವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಆತನ ತಂದೆ ಪ್ರಕಾಶ್ ಸಂಗ್ರಹವಾಗಿರುವ ಹಣವನ್ನು ಆದಷ್ಟು ಬೇಗ ನೇಪಾಳ ಸಂತ್ರಸ್ತರಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ.

Write A Comment