ಅಂತರಾಷ್ಟ್ರೀಯ

ವೀಸಾಕ್ಕೆ ನಕಲಿ ಮದುವೆ: ಭಾರತೀಯ ದಂಪತಿ ವಿಚಾರಣೆ

Pinterest LinkedIn Tumblr

Just married couple, holding hands and walking in nature

ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಪುರುಷರಿಗೆ ಸುಲಭವಾಗಿ ವೀಸಾ ದೊರಕಿಸಿಕೊಡಲು ನಕಲಿ ಮದುವೆ ಆಯೋಜಿಸುತ್ತಿದ್ದ ಭಾರತೀಯ ಮೂಲದ ದಂಪತಿಯನ್ನು ಬ್ರಿಸ್ಬೇನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದೆ.

ವೀಸಾಕ್ಕಾಗಿ ನಕಲಿ ಮದುವೆಯ 17 ಪ್ರಕರಣ ಮತ್ತು ಕಾಮನ್‌ವೆಲ್ತ್ ಸಾರ್ವಜನಿಕ ಅಧಿಕಾರಿಯ ಮೇಲೆ ಪ್ರಭಾವ ಬೀರಿರುವುದು ಸೇರಿದಂತೆ ಚೇತನ್ ಮೋಹನ್ ಲಾಲ್ ಮಶ್ರು ವಿರುದ್ಧ 28 ಆರೋಪ ದಾಖಲಾಗಿದೆ. ಅವರ ಪತ್ನಿ ದಿವ್ಯ ಕೃಷ್ಣೇಗೌಡ ವಿರುದ್ಧ ನಕಲಿ ಮದುವೆಯ 17 ಪ್ರಕರಣ ದಾಖಲಾಗಿವೆ.

2012ರ ಏಪ್ರಿಲ್‌ನಲ್ಲಿ ನಕಲಿ ವಿವಾಹಗಳ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ಈ ಬಗ್ಗೆ ತನಿಖೆ ಕೈಗೊಳ್ಳಾಯಿತು ಎಂದು ವಲಸೆ ವಿಭಾಗದ ಅಧಿಕಾರಿ ರಾಬರ್ಟ್ ಅನ್ಸೆಲ್ ಕೋರ್ಟ್‌ಗೆ ಹೇಳಿದರು. ದಿವ್ಯ ಕೃಷ್ಣೇಗೌಡ ನೇತೃತ್ವದಲ್ಲಿ ಮದುವೆಯಾಗಿರುವ 40-50 ಮಂದಿಯ ವೀಸಾ ಅರ್ಜಿ ಕುರಿತು ಅವರು ಶಂಕೆ ವ್ಯಕ್ತಪಡಿಸಿದರು.

Write A Comment