ರಾಷ್ಟ್ರೀಯ

ಸೋನಿಯಾ, ರಾಹುಲ್‌ ಬಣ್ಣ ಬಯಲು ಮಾಡಲಿದೆ ಕಿರಣ್‌ ಪುಸ್ತಕ

Pinterest LinkedIn Tumblr

kiran-kumar

ಹೈದರಾಬಾದ್‌: ಆಂಧ್ರ ಪ್ರದೇಶ ವಿಭಜನೆ ನಂತರ ರಾಜಕೀಯದಿಂದ ಮರೆಯಾಗಿರುವ ಮಾಜಿ ಸಿಎಂ ಕಿರಣ್‌ ಕುಮಾರ್‌ ರೆಡ್ಡಿ, ವಿಭಜನೆ ಕುರಿತು ಸ್ಫೋಟಕ ಮಾಹಿತಿ ಒಳಗೊಂಡಿರುವ ಪುಸ್ತಕ ಬರೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
‘ಆಂಧ್ರ ವಿಭಜನೆ ಕುರಿತ ಸತ್ಯಾಂಶಗಳನ್ನು ಒಳಗೊಂಡಿರುವ ಪುಸ್ತಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಹಾಗೂ ಆಂಧ್ರದ ಇನ್ನಿತರ ಕಾಂಗ್ರೆಸ್‌ ನಾಯಕರ ಬಣ್ಣ ಬಯಲು ಮಾಡಲಿದೆ,’ ಎಂದು ಕಿರಣ್‌ ಹೇಳಿದ್ದಾರೆ.

‘ಆಂಧ್ರ ವಿಭಜನೆಯ ಎಲ್ಲ ಮಾಹಿತಿಯನ್ನು ಕಲೆ ಹಾಕಿದ್ದೇನೆ. ಸರಕಾರದಲ್ಲಿ ಆಗ ನಡೆದ ಬೆಳವಣಿಗೆಗಳ ಪೂರ್ಣ ವಿವರ ಪುಸ್ತಕದಲ್ಲಿ ಇರಲಿದೆ. ಆ ಎಲ್ಲ ಮಾಹಿತಿಗೆ ಪೂರಕವಾದ ಸಾಕ್ಷಾಧ್ಯಾರವೂ ಇರಲಿದೆ,’ ಎಂದು 400 ಪುಟಗಳ ಪುಸ್ತಕ ಪೂರ್ಣಗೊಳಿಸಿರುವ ಕಿರಣ್‌ ಹೇಳಿದ್ದಾರೆ.

‘ಅಮೆರಿಕದಲ್ಲಿ ಕೆಲ ಕಾಲ ತಂಗಿದ್ದ ಸಂದರ್ಭದಲ್ಲಿ ಪುಸ್ತಕದ ಬಹುತೇಕ ಭಾಗ ಪೂರ್ಣಗೊಳಿಸಿದ್ದೆ, ಪುಸ್ತಕಕ್ಕೆ ಇನ್ನೂ ಹೆಸರಿಟ್ಟಿಲ್ಲ. ತಿಂಗಳೊಳಗೆ ಬಿಡುಗಡೆ ಆಗಲಿದೆ,’ ಎಂದು ಅವರು ಹೇಳಿದ್ದಾರೆ.
ಪುಸ್ತಕದ ಬಗ್ಗೆ ಹೆಚ್ಚು ವಿವರ ಹಂಚಿಕೊಳ್ಳಲು ಕಿರಣ್‌ ನಿರಾಕರಿಸಿದ್ದರೂ, ವಿಭಜನೆ ವಿಚಾರವಾಗಿ ಸೋನಿಯಾ , ರಾಹುಲ್‌ , ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಯುಪಿಎದ ಹಿರಿಯ ಸಚಿವರ ಜತೆ ಅವರು ನಡೆಸಿದ್ದ ಮಾತುಕತೆಯ ವಿವರ ಪುಸ್ತಕದಲ್ಲಿದೆ ಮೂಲಗಳು ಹೇಳಿವೆ.
ಆಂಧ್ರ ವಿಭಜನೆ ವಿಚಾರವಾಗಿ ಕಾಂಗ್ರೆಸ್‌ ತೊರೆದ ಮಾಜಿ ಸಿಎಂ, ಜೈ ಸಮೈಕ್ಯಾಂದ್ರ ಎಂಬ ಹೊಸ ಪಕ್ಷ ಹುಟ್ಟುಹಾಕಿದ್ದರು. ಹೊಸ ಪ್ರಯತ್ನದಲ್ಲಿ ಸಫಲರಾಗದ ಕಿರಣ್‌ ನಂತರದ ದಿನಗಳಲ್ಲಿ ಗಾಲ್ಫ್‌ ಆಟ ಹಾಗೂ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ.

Write A Comment