ರಾಷ್ಟ್ರೀಯ

ಸಾಮಾನ್ಯ ರೈತನನ್ನು ವರಿಸಿದ ಕೇರಳ ಸಚಿವೆ!

Pinterest LinkedIn Tumblr

jayalkshmi-kerala

ವೈನಾಡು: ಇದು ಆಶ್ಚರ್ಯ ಆದ್ರೂ ಸತ್ಯ. ರಾಜಕೀಯ ವ್ಯಕ್ತಿಗಳ ಮಕ್ಕಳು, ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಅಥವಾ ಅವರ ಮಕ್ಕಳನ್ನು ವಿವಾಹವಾಗುವುದು ಸಾಮಾನ್ಯ . ಆದ್ರೆ ಕೇರಳದ ಸಚಿವೆಯೊಬ್ಬರು ರೈತನನ್ನು ವಿವಾಹವಾಗಿ ಎಲ್ಲರನ್ನು ಆಶ್ಟರ್ಯ ಚಕಿತಗೊಳಿಸಿದ್ದಾರೆ.

ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ ಪರಿಶಿಷ್ಟ ಜನಾಂಗ ಹಾಗೂ ಯುವಜನ ಸೇವೆ ವ್ಯವಹಾರಗಳ ಸಚಿವೆಯಾಗಿರುವ ಪಿ.ಕೆ ಜಯಲಕ್ಷ್ಮಿ ಇಂದು ಸಾಮಾನ್ಯ ರೈತನೊಬ್ಬನ ಜೊತೆ ಸಪ್ತಪದಿ ತುಳಿದಿದ್ದಾರೆ.

ಕೇರಳದ ಕುರಿಚಿಯ ಜನಾಂಗದ ಸಂಪ್ರದಾಯದಂತೆ ವಿವಾಹ ನೆರವೇರಿತು. ಹಸಿರು ರೇಷ್ಮೆ ಸೀರೆಯುಟ್ಟು ಅನಿಲ್ ಕುಮಾರ್ ಅವರಿಂದ ತಾಳಿ ಕಟ್ಟಿಸಿಕೊಂಡರು. ನಂತರ ಮಲ್ಲಿಗೆ ಹೂವಿನ ಹಾರವನ್ನು ಪರಸ್ಪರ ಬದಲಾಯಿಸಿಕೊಂಡರು.

ಕೇರಳ ಮುಖ್ಯಮಂತ್ರಿ ಒಮ್ಮನ್ ಚಾಂದಿ, ವಿರೋಧ ಪಕ್ಷದ ನಾಯಕ ಅಚ್ಯುತಾನಂದ ವಧುವರರನ್ನು ಆಶೀರ್ವದಿಸಿದರು. ಉತ್ತರ ಕೇರಳದ ಜಿಲ್ಲೆಯ ವಳಾಡುವಿನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ  ಕೇರಳ ವಿಧಾನ ಸಭೆ ಸ್ಪೀಕರ್ ಎನ್. ಶಕ್ತನ್, ಕೆ.ಸಿ ಜೋಸೆಫ್, ರಮೇಶ್ ಚೆನ್ನಿತಾಲ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದರು. ಜಯಲಕ್ಷ್ಮಿ ಮಾನಂತವಾಡಿ ವಿಧಾನ ಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

Write A Comment