ರಾಷ್ಟ್ರೀಯ

ಪತ್ನಿ ಎದುರಿನಲ್ಲಿಯೇ ಮಗಳೊಂದಿಗೆ ಹಾಸಿಗೆ ಹಂಚಿಕೊಂಡ ಭೂಪ !

Pinterest LinkedIn Tumblr

4899CHILD-RAPE

ಬದಲಾಗುತ್ತಿರುವ ಸಮಾಜದಲ್ಲಿ ಕಾಮುಕ ಪ್ರವೃತ್ತಿ ಹೆಚ್ಚುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಹೆತ್ತ ತಂದೆಯೊಬ್ಬ ತನ್ನ ಪತ್ನಿಯ ಎದುರಿನಲ್ಲಿಯೇ ಮಗಳ ಮೇಲೆ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ.

ಅಂಬಾಲಾದ ಜೋಗಿವಾರದಲ್ಲಿ ಈ ಘಟನೆ ನಡೆದಿದ್ದು, ಟ್ರಾನ್ಸ್‌ಪೋರ್ಟ್ ಇಲಾಖೆಯಲ್ಲಿ ಕೆಲಸ ಮಾಡುವ ಆರೋಪಿ ಹಾಗೂ ಆತನ ಮನೆಯವರು ಮಂಗಳವಾರ ದಿನ ರಾತ್ರಿ ಮಲಗಿ ನಿದ್ರಿಸುತ್ತಿದ್ದರು. ಈ ಸಮಯದಲ್ಲಿ  ಮಗಳು ಕಿರುಚಿಕೊಳ್ಳುತ್ತಿರುವುದನ್ನು ಕೇಳಿ ಎದ್ದ ತಾಯಿ ಪತಿ ಸ್ವಂತ ಮಗಳ ಮೇಲೆ ಬಲಾತ್ಕಾರ ಮಾಡುತ್ತಿರುವುದನ್ನು ಕಂಡು ದಂಗಾಗಿದ್ದಾಳೆ. ಅಲ್ಲದೇ ಆಕೆ ಎಷ್ಟೇ ಪ್ರಯತ್ನ ಪ್ರಯತ್ನ ಪಟ್ಟರೂ ಅತ್ಯಾಚಾರವನ್ನು ತಪ್ಪಿಸಲು ವಿಫಲವಾಗಿದ್ದು ಆಕ್ರೋಶಗೊಂಡು ನೆರೆಹೊರೆಯವರಿಗೆ ಈ ಸುದ್ದಿ ತಿಳಿಸಿದ್ದಾಳೆ.

ಅಲ್ಲದೇ ಮಧ್ಯರಾತ್ರಿಯೇ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದ  ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಕಳೆದ ಒಂದು ವರ್ಷದಿಂದ ಈ ಕೃತ್ಯ ನಡೆಸುತ್ತಿದ್ದೆ ಎಂದು ಕಾಮುಕ ತಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Write A Comment