ರಾಷ್ಟ್ರೀಯ

ಸಂಸತ್ತಿನೊಳಗೆ ಕಾಂಗ್ರೆಸ್ ಜೊತೆ ರಂಗ ರಚನೆಗೆ ಸಿದ್ಧ: ಯೆಚೂರಿ

Pinterest LinkedIn Tumblr

SitaRamYechur

ಹೊಸದಿಲ್ಲಿ, ಮೇ 3: ಭೂಸ್ವಾಧೀನ ಮಸೂದೆ ಮತ್ತು ಜಾತ್ಯತೀತವಾದಗಳಂತಹ ವಿಷಯಗಳ ಮೇಲೆ ಸಂಸತ್ತಿನಲ್ಲಿ ಕಾಂಗ್ರೆಸ್‌ನೊಂದಿಗೆ ರಂಗ ರಚನೆಗೆ ತಾನು ಸಿದ್ಧ ಎಂದು ಸಿಪಿಎಂ ತಿಳಿಸಿದೆ. ಆದರೆ ‘ಅವರು ನಂಬಿಕೆಗೆ ಅರ್ಹರಲ್ಲದ ಕಾರಣ’ ಸಂಸತ್ತಿನ ಹೊರಗೆ ರಾಷ್ಟ್ರೀಯ ರಂಗ ಇಲ್ಲವೇ ಅಂತಹ ಮೈತ್ರಿಕೂಟವೊಂದರ ಭಾಗವಾಗುವ ಸಾಧ್ಯತೆಯನ್ನು ಪಕ್ಷ ತಳ್ಳಿ ಹಾಕಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯು ಬಿಜೆಪಿ ವಿರೋಧಿ ಶಕ್ತಿಗಳಿಗೆ ಸತ್ವಪರೀಕ್ಷೆಯಾಗಿದೆ ಎಂದು ಸಿಪಿಎಂನ ನೂತನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಜನತಾ ಪರಿವಾರಗಳ ವಿಲೀನ ನಿರ್ಧಾರವು ಹೇಗೆ ಕೆಲಸ ಮಾಡಲಿದೆ ಎಂಬುದನ್ನು ತಾವು ಕಾದು ನೋಡುತ್ತಿರುವುದಾಗಿ ಯೆಚೂರಿ ಹೇಳಿದ್ದಾರೆ.

ಭೂಸ್ವಾಧೀನ ಮಸೂದೆಯ ಮೇಲೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ್ದ ಸಂಸದರ ನಿಯೋಗದಲ್ಲಿ ಸಿಪಿಎಂ ಪಕ್ಷ ಸೇರ್ಪಡೆಯಾಗಿತ್ತು. ಪಕ್ಷವನ್ನು ಬಲಪಡಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಯೆಚೂರಿ ಹೇಳಿದ್ದಾರೆ.

‘ದೇಶ ಮತ್ತು ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಎಲ್ಲ ವಿಷಯಗಳಲ್ಲಿ (ಉದಾಹರಣೆಗೆ ಭೂಸ್ವಾಧೀನ ಮಸೂದೆ) ಸಂಸತ್ತಿನೊಳಗೆ ಒಗ್ಗಟ್ಟಿನಿಂದ ಇರುತ್ತೇವೆ ಎಂದು ನಾವು ಹೇಳಿದ್ದೇವೆ. ಆದರೆ, ಸಂಸತ್ತಿನ ಹೊರಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ರಂಗವೊಂದನ್ನು ಬಿಂಬಿಸುವುದು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎಂದು ಪಕ್ಷ ಹೇಳಿದೆ. ಯಾಕೆಂದರೆ, ಅಂತಹ ರಂಗವೊಂದಕ್ಕೆ ಬದಲಿ ನೀತಿಯೊಂದರ ಆವಶ್ಯಕತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಸಾಧ್ಯತೆಗಳು ಕಾಣುತ್ತಿಲ್ಲ’ ಎಂದು ಯೆಚೂರಿ ಹೇಳಿದ್ದಾರೆ.

ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಸೋನಿಯಾ ಗಾಂಧಿಯವರ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಜೊತೆಗೆ ಸಿಪಿಎಂನ ನಿಲುವೇನು ಎಂಬ ಪ್ರಶ್ನೆಗೆ ಯೆಚೂರಿ ಉತ್ತರಿಸುತ್ತಿದ್ದರು. ಭೂಸ್ವಾಧೀನ ಮಸೂದೆಯ ವಿರುದ್ಧ ರಾಹುಲ್ ಗಾಂಧಿ ಇತ್ತೀಚೆಗೆ ಕೈಗೊಂಡಿರುವ ಆಂದೋಲನ ಬಹಳ ಉತ್ತಮ ಕ್ರಮ ಎಂದು ಯೆಚೂರಿ ಅಭಿಪ್ರಾಯಪಟ್ಟರು.

‘ಸದ್ಯದ ಮಟ್ಟಿಗೆ ಕಾಂಗ್ರೆಸ್ ಪಕ್ಷವು ಸಂತುಲಿತ ಬದಲಿ ವ್ಯವಸ್ಥೆ ಎನಿಸಿಕೊಂಡಿಲ್ಲ. ಮುಂದಿನ ಪ್ರಮುಖ ವಿಷಯಕ್ಕಾಗಿ ನಾವು ಕಾದು ನೋಡಬೇಕು. ಜಿಎಸ್‌ಟಿ ಮಸೂದೆ ಮತ್ತು ಕಾರ್ಮಿಕ ಕಾನೂನು ಸುಧಾರಣೆಗೆ ಸರಕಾರ ಪ್ರಯತ್ನಿಸುತ್ತಿದೆ. ನಮ್ಮ ನಡುವೆ ಜಂಟಿ ಹೋರಾಟಕ್ಕೆ ಇವು ಹೊಸ ಅವಕಾಶವಾಗಲಿದೆ ಎಂದು ಯೆಚೂರಿ ಹೇಳಿದ್ದಾರೆ.
-ವಾತಾಱಭಾರತಿ

Write A Comment