ರಾಷ್ಟ್ರೀಯ

ಹಸುವೊಂದು ಬರೆಯುತ್ತಿದೆ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ !

Pinterest LinkedIn Tumblr

ha

ಶ್ರೀನಗರ: ಈಗಿನ ಕಾಲದ ವಿದ್ಯಾರ್ಥಿಗಳಿಗೆ ಓದು ಎಂದರೆ ಅಲರ್ಜಿ, ಪರೀಕ್ಷೆ ಎಂದರೆ ನಡುಕ. ಪರೀಕ್ಷೆ ಬರೆಯಲು ಮನುಷ್ಯರೇ ಎದುಸಿರು ಬರೆಯುವಾಗ ಹಸುವೊಂದು ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿಕೊಂಡು ಸುದ್ದಿಯಲ್ಲಿದೆ.

ಹೌದು, ಕಾಶ್ಮೀರದಲ್ಲಿ ಹಸುವೊಂದು ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದೆ. ಬರುವ ಮೇ 10ರಂದು  ಈ ಹಸು ಡಿಪ್ಲೋಮೋ ಇನ್ ಪಾಲಿಟೆಕ್ನಿಕ್ ಪರೀಕ್ಷೆ ಬರೆಯಲಿದೆ. ಪರೀಕ್ಷೆ ಬರೆಯಲು ಬೋರ್ಡ್ಆಫ್ ಪ್ರೊಫೆಶನಲ್ ಎಂಟ್ರೆನ್ಸ್ ಎಕ್ಸಾಮಿನೇಷನ್ ( ಬಿಒಪಿಇಇ) ಹಸುವಿಗೆ ಪ್ರವೇಶ ಪತ್ರವನ್ನು ನೀಡಿದೆ. ಬೆಮಿನಾದ ಸರಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಈ ಆಕಳಿಗೆ ಅವಕಾಶ ಕಲ್ಪಿಸಲಾಗಿದೆ.

ಗುರದಂಡ್ ಹೆಸರಿನ ಕೆಂಪು ಬಣ್ಣದ ಎತ್ತಿನ ಮಗಳು ಕಾಚಿರ್ಗಾವ್ ಎಂಬ ಕಂದು ಬಣ್ಣದ ಹಸುವಿಗೆ ಪ್ರವೇಶ ಪತ್ರ ನೀಡಲಾಗಿದೆ.ಜಮ್ಮು ಮತ್ತು ಕಾಶ್ಮೀರದ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಜುನೈದ್ ಅಝೀಂ ಮಟ್ಟು ಅವರು ಈ ಪ್ರವೇಶಪತ್ರವನ್ನು ಟ್ವಿಟ್ ಮಾಡಿದ್ದ ಬಳಿಕ ಬಿಒಪಿಇಇನಿಂದಾದ ಈ ತಪ್ಪು ಬೆಳಕಿಗೆ ಬಂದಿದೆ.

“ಈಗ ಎಲ್ಲಾ ಅರ್ಜಿಗಳನ್ನು ಆನ್ಲೈನ್ ಮಾಡಲಾಗಿದೆ. ಮಾನವ ಮುಖ ಮತ್ತು ಪ್ರಾಣಿಯ ಮುಖವೆಂದು ಬೇರ್ಪಡಿಸಲು ಗುರುತಿಸುವಿಕೆ ತಂತ್ರಾಂಶ ಇಲ್ಲ. ಯಾರೋ ತಮಾಷೆಗಾಗಿ ಈ ರೀತಿ ಮಾಡಿದ್ದಾರೆ “, ಎಂದು  ಬಿಒಪಿಇಇ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿರುವ ಅಹಮಿದ್ ಮಿರ್ ತಮ್ಮ ಬೋರ್ಡ್ ಕಡೆಯಿಂದಾದ ತಪ್ಪಿಗೆ ಸಮರ್ಥನೆ ನೀಡಿದ್ದಾರೆ.
– ವೆಬ್ ದುನಿಯಾ

Write A Comment