ರಾಷ್ಟ್ರೀಯ

ದಿಲ್ಲಿ ಐಜಿಐ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ!

Pinterest LinkedIn Tumblr

delhi airport

ಹೊಸದಿಲ್ಲಿ: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2014ರ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಪರಿಗಣಿಸಲಾಗಿದೆ. ವಾರ್ಷಿಕ 2.5ರಿಂದ 4 ಕೋಟಿ ವಿಮಾನಯಾನಿಗಳನ್ನು ನಿರ್ವಹಿಸುವ ವಿಮಾನ ನಿಲ್ದಾಣಗಳ ಗುಂಪಿನಲ್ಲಿ ಅದಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ಇಲ್ಲಿ ತಿಳಿಸಿವೆ.

ಎಪ್ರಿಲ್ 28ರಂದು ಜೋರ್ಡಾನ್‌ನಲ್ಲಿ ನಡೆದ ಎಸಿಐ ಏಷ್ಯಾ-ಪೆಸಿಫಿಕ್/ವರ್ಲ್ಡ್ ವಾರ್ಷಿಕ ಮಹಾಸಭೆಯಲ್ಲಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ‘ವಿಮಾನನಿಲ್ದಾಣ ಸೇವಾ ಗುಣಮಟ್ಟ’ (ಎಎಸ್‌ಕ್ಯೂ) ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ಎಂದು ದಿಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಐ.ಪ್ರಭಾಕರ ರಾವ್ ಹೇಳಿದ್ದಾರೆ.

ಎಸಿಐನ ಎಎಸ್‌ಕ್ಯೂ ಮಾನದಂಡ ಕಾರ್ಯಕ್ರಮದಲ್ಲಿ ದಿಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು 5 ಅಂಕಗಳ ಪೈಕಿ 4.90 ಅಂಕಗಳನ್ನು ಗಳಿಸಿತ್ತು. 2011, 2012 ಮತ್ತು 2013ರಲ್ಲಿ ಸತತವಾಗಿ ಎರಡನೇ ಸ್ಥಾನದಲ್ಲಿದ್ದ ವಿಮಾನನಿಲ್ದಾಣವು 2014ರಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ರಾವ್ ತಿಳಿಸಿದ್ದಾರೆ.

Write A Comment