ಅಂತರಾಷ್ಟ್ರೀಯ

ಅಮೆರಿಕ: ವಿದ್ಯಾರ್ಥಿ ವೀಸಾ ವಂಚನೆ ಪ್ರಕರಣ ; ಮೂವರು ಭಾರತೀಯರಿಂದ ತಪ್ಪೊಪ್ಪಿಗೆ

Pinterest LinkedIn Tumblr

Cheating

ನ್ಯೂಯಾರ್ಕ್, ಮೇ 2: ಲಾಭಗಳಿಸುವ ಉದ್ದೇಶದಿಂದ ತಾವು ನಡೆಸುತ್ತಿದ್ದ ಶಾಲೆಯ ಮೂಲಕ ವಿದ್ಯಾರ್ಥಿ ವೀಸಾ ಹಾಗೂ ಆರ್ಥಿಕ ನೆರವು ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದ ಭಾರತೀಯ ಮೂಲದ ಮೂವರು ತಪ್ಪೊಪ್ಪಿಕೊಂಡಿದ್ದು, ತಾವು ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 80 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ೆಡರಲ್ ಅಕಾರಿಗಳಿಗೆ ಹಸ್ತಾಂತರಿಸಲು ಒಪ್ಪಿಕೊಂಡಿರುವುದಾಗಿ ವರದಿಯೊಂದು ತಿಳಿಸಿದೆ.

ಅಮೆರಿಕದ ವಲಸೆ ಹಾಗೂ ಸೀಮಾಸುಂಕ ಕಾನೂನು ಜಾರಿ ಇಲಾಖೆಯ ಗೃಹ ಭದ್ರತಾ ತನಿಖಾ ವಿಭಾಗ(ಐಸಿಸಿ-ಎಚ್‌ಎಸ್‌ಐ)ವು ದೀರ್ಘಕಾಲದ ತನಿಖಾ ಕಾರ್ಯಾಚರಣೆ ನಡೆಸಿದ ಬಳಿಕ 2014ರ ಮೇಯಲ್ಲಿ ಮೂವರು ಭಾರತೀಯ ಮೂಲದವರಾದ ಸುರೇಶ್ ಹಿರಾನಂದಾನಿ (61), ಲಲಿತ್ ಛಾಬ್ರಿಯ(54) ಹಾಗೂ ಅನಿತಾ ಛಾಬ್ರಿಯ(50) ಎಂಬವರನ್ನು ಸಹ ಆರೋಪಿಗಳಾದ ಸಮೀರ್ ಹಿರಾನಂದಾನಿ ಹಾಗೂ ಸೀಮಾ ಶಾರೊಂದಿಗೆ ಬಂಸಿತ್ತು.

ಹಿರಾನಂದಾನಿ ಹಾಗೂ ಛಾಬ್ರಿಯ ಎಂಬವರು ಅಕ್ರಮ ವಿದ್ಯಾರ್ಥಿ ವೀಸಾ ಹಾಗೂ ಹಣಕಾಸು ನೆರವು ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಒಪ್ಪಿಕೊಂಡಿದ್ದು, ತಾವು ಸಂಗ್ರಹಿಸಿದ್ದ ಸುಮಾರು 74 ಲಕ್ಷ ಡಾಲರ್ ಮೊತ್ತವನ್ನು ಅಕಾರಿಗಳಿಗೆ ಒಪ್ಪಿಸಲು ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಆರೋಪಿಗಳು ತಲಾ ಗರಿಷ್ಠ 10 ವರ್ಷಗಳ ಜೈಲುಶಿಕ್ಷೆ ಎದುರಿಸುವ ಸಾಧ್ಯತೆಯಿದ್ದು, ಸೆಪ್ಟಂಬರ್‌ನಲ್ಲಿ ಶಿಕ್ಷೆ ಪ್ರಕಟಗೊಳ್ಳಲಿದೆ.

Write A Comment