ರಾಷ್ಟ್ರೀಯ

ಕಾರಿನಲ್ಲಿಯೇ ಯುವತಿಗೆ ಮತ್ತು ಬರಿಸುವ ಜ್ಯೂಸ್ ಕುಡಿಸಿ ಸಾಮೂಹಿಕ ಅತ್ಯಾಚಾರ

Pinterest LinkedIn Tumblr

2723m_id_364920_woman_

ಬಸ್ಸಿನಲ್ಲಿ ಅತ್ಯಾಚಾರ ನಡೆಸಿದ ಘಟನೆ ಮಾಸುವ ಮುನ್ನವೇ ಚಲಿಸುತ್ತಿದ್ದ ಕಾರಿನಲ್ಲಿ 22 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಜ್ನಾರ್ ಜಿಲ್ಲೆಯಲ್ಲಿ ನಡೆದಿದೆ.

ಬಿಜ್ನಾರ್ ಜಿಲ್ಲೆಯ ನಾಗಿನ ಗ್ರಾಮದ ಯುವತಿಯ ಮೇಲೆ ಪರಿಚಯಸ್ಥನೊಬ್ಬ ಆಕೆಗೆ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಕರೆಸಿಕೊಂಡಿದ್ದು ನಂತರ ಅವನ ಇಬ್ಬರು ಸ್ನೇಹಿತರಿದ್ದ ಕಾರಿನಲ್ಲಿ ಆಕೆಯನ್ನು ಮೀರತ್ ಗೆ ಕರೆದುಕೊಂಡು ಹೋಗಿದ್ದು ಈ ಸಮಯದಲ್ಲಿ ಆಕೆಗೆ ಮತ್ತು ಬೆರೆಸಿದ್ದ ಪಾನೀಯವನ್ನು ನೀಡಿದ್ದಾರೆ. ಆಕೆ ಅದನ್ನು ಕುಡಿದು ಪ್ರಜ್ಞೆ ಕಳೆದುಕೊಂಡಿದ್ದು ಆತ ಹಾಗೂ ಆತನ  ಇಬ್ಬರು ಸ್ನೇಹಿತರು ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯನ್ನು ಅಜ್ರಾದ ಹಳ್ಳಿ ಬಳಿಯಿರುವ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ.

ಪ್ರಜ್ಞೆ ಕಳೆದುಕೊಂಡಿದ್ದ ಯುವತಿಯನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಯುವತಿಯು ಹೇಳಿಕೆಯನ್ನು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾಮುಕರ ಬಂಧನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
-ಕೃಪೆ: ಕನ್ನಡ ದುನಿಯಾ

Write A Comment