ರಾಷ್ಟ್ರೀಯ

ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಗಳನ್ನು ದ್ವೇಷ ಬಿತ್ತಲು ದುರ್ಬಳಕೆ ಮಾಡಲಾಗುತ್ತಿದೆ: ಸರ್ಕಾರ

Pinterest LinkedIn Tumblr

TwitterLogo_AP

ನವದೆಹಲಿ: ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಹಾಗು ಹಲವಾರು ಸನ್ನಿವೇಶಗಳಲ್ಲಿ ದೇಶದಲ್ಲಿ ಪರಸ್ಪರ ದ್ವೇಷ ಬಿತ್ತಲು ಬಳಸಲಾಗುತ್ತಿದೆ ಎಂದು ಸರ್ಕಾರ ಇಂದು ಹೇಳಿದೆ.

“ಟ್ವಿಟರ್, ಫೇಸ್ ಬುಕ್, ಬ್ಲಾಗ್, ಇಮೇಲ್, ವಾಟ್ಸ್ ಆಪ್ ಗಳನ್ನು ದುರ್ಬಳಕೆ ಮಾಡಿ ದೇಶದಲ್ಲಿ ದ್ವೇಷದ ಪ್ರಚಾರಕ್ಕೆ ಬಳಸುತಿರುವುದು ಸರ್ಕಾರದ ಗಮನಕ್ಕೆ ಆಗಾಗ ಬಂದಿದೆ” ಎಂದು ಗೃಹ ಸಚಿವಾಲಯ ರಾಜ್ಯ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಹಲವಾರು ಅಂತರ್ಜಾಲ ತಾಣಗಳಲ್ಲಿ ಹಾಗೂ ಬೇರೆ ದೇಶಗಳು ನಡೆಸುವ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಿಸುವ, ಹಾನಿಕಾರಕ ಹಾಗು ದ್ವೇಷಪೂರಿತ ಬರಹಗಳು ಇರುವ ಹಲವು ಉದಾಹರಣೆಗಳು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಚೌಧರಿ ತಿಳಿಸಿದ್ದಾರೆ.

ಆದರೆ ಸರ್ಕಾರ ಸಾಮಾಜಿಕ ಜಾಲತಾಣಗಳ ಬರಹಗಳನ್ನು ನಿಯಂತ್ರಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ (ಮಧ್ಯಸ್ಥಗಾರ ಸಲಹಾಸೂತ್ರಗಳು) ೨೦೧೧ರ ನಿಯಮಗಳು ವಿಭಾಗ ೭೯ರ ಅಡಿ ತಮ್ಮ ಸೇವೆಯ ಬಳಕೆದಾರರಿಗೆ ಯಾವುದೇ ಹಾನಿಕಾರಕ, ಆಕ್ಷೇಪಣೀಯ ಮಾಹಿತಿಯನ್ನು ಅಪ್ರಾಪ್ತರಿಗೆ ಹಾನಿ ಮಾಡುವ ಅಥವಾ ಕಾನೂನುಬಾಹಿರ ಮಾಹಿತಿಗಳನ್ನು ಅಪ್ಲೋಟ್ ಮಾಡುವುದು, ಹೋಸ್ಟ್ ಮಾಡುವುದು, ಪ್ರಕಟಿಸಿವುದು, ತಿದ್ದುವುದು, ಹಂಚಿಕೊಳ್ಳುವುದನ್ನು ಮಾಡದಂತೆ ತಿಳಿಸುವುದು ಮಧ್ಯಸ್ಥಗಾರರ ಕೆಲಸ ಎಂದು ಅವರು ತಿಳಿಸಿದ್ದಾರೆ.
-ಕೃಪೆ: ಕನ್ನಡ ಪ್ರಭ

Write A Comment