ರಾಷ್ಟ್ರೀಯ

ರೈತರು ಹೇಡಿಗಳಲ್ಲ, ಹೋರಾಟಗಾರರು: ಸ್ಪಷ್ಟನೆ ನೀಡಿದ ಹರಿಯಾಣ ಸಚಿವ

Pinterest LinkedIn Tumblr

OP-Dhankar-clarifies-his-statement

ಚಂಡೀಗಡ: ವಿವಾದಾತ್ಮಕ ಹೇಳಿಕೆ ನೀಡಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹರಿಯಾಣ ಕೃಷಿ ಸಚಿವ ಒ.ಪಿ.ಧಂಕರ್ ಅವರು ತಮ್ಮ ಹೇಳಿಕೆ ಸ್ಫಷ್ಟನೆ ನೀಡಿದ್ದು, ರೈತರು ಹೋರಾಟಗಾರರಾಗಿದ್ದು, ಹೇಡಿಯಂತಹ ಆತ್ಮಹತ್ಯೆಯ ಕೃತ್ಯಗಳಿಗೆ ಕೈ ಹಾಕಬಾರದು ಎಂದು ಹೇಳಿದ್ದಾರೆ.

ತಾವು ಯಾವುದೇ ರೀತಿಯಲ್ಲೂ ರೈತರಿಗೆ ನೋವಾಗುವಂತಹ ಹೇಳಿಕೆ ನೀಡಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳಂತಹ ವ್ಯಕ್ತಿಗಳು. ಹೋರಾಟಗಾರರಾಗಿರುವ ರೈತರು ಇಂತಹ ಹೇಡಿತನದ ಕೆಲಸಕ್ಕೆ ಕೈ ಹಾಕಬಾರದು ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದೆ ಎಂದು ತಮ್ಮ ಹೇಳಿಕೆಗೆ ಒ.ಪಿ.ಧಂಕರ್ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮದವರ ಮೇಲೆ ಆರೋಪ ವ್ಯಕ್ತಪಡಿಸಿರುವ ಧಂಕರ್ ಅವರು, ನಾನು ನೀಡಿದ ಈ ಹೇಳಿಕೆಯ ವೀಡಿಯೋವನ್ನು ಮಾಧ್ಯಮಗಳು ತಿರುಚಿ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಒ.ಪಿ.ಧಂಕರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಕಾನೂನಿನ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವವರು ಅಪರಾಧಿಯಾಗಿದ್ದು, ಆತನ ಸಾವಿಗೆ ಆತನೇ ಕಾರಣನಾಗುತ್ತಾನೆ. ಸಂಸಾರ, ಕುಟುಂಬವನ್ನು ನಿಭಾಯಿಸುವುದಕ್ಕೆ ಸಾಧ್ಯವಾಗದೆ ಹೇಡಿತನದಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಸಾವಿಗೆ ಸರ್ಕಾರ ಜವಾಬ್ದಾರಿಯಲ್ಲ. ಇಂತಹವರಿಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆಯುವುದಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು.
-ಕೃಪೆ: ಕನ್ನಡ ಪ್ರಭ

Write A Comment