ರಾಷ್ಟ್ರೀಯ

ಮನಮೋಹನ್ ಸಿಂಗ್‌ರ ವಿದೇಶಿ ಪ್ರವಾಸಕ್ಕೆ ಖರ್ಚಾಗಿದ್ದು ಒಟ್ಟು 676 ಕೋಟಿ

Pinterest LinkedIn Tumblr

Manmohan-Singh

ಕೊಯಂಬತ್ತೂರ್: ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿದೇಶಿ ಪ್ರವಾಸಕ್ಕೆ ಸುಮಾರು 676 ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು ಎಂಬ ಅಂಶ ಬಹಿರಂಗಗೊಂಡಿದೆ.

ಆರ್‌ಟಿಐ ಕಾರ್ಯಕರ್ತ ಡೇನಿಯಲ್ ಜೇಸುದಾಸ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತಂತೆ ಮಾಹಿತಿ ನೀಡಿರುವ ಪ್ರಧಾನಮಂತ್ರ ಕಚೇರಿ ಮೇ 2004 ರಿಂದ ಮಾರ್ಚ್ 2013ರವರೆಗೂ ಮನಮೋಹನ್ ಸಿಂಗ್ ಅವರ ವಿದೇಶಿ ಪ್ರವಾಸಕ್ಕೆ ಒಟ್ಟು 676 ಕೋಟಿ ವೆಚ್ಚ ಮಾಡಲಾಗಿದೆ. ಮನಮೋಹನ್ ಸಿಂಗ್ ಅವರ 9 ವರ್ಷಗಳ ಆಡಳಿತಾವಧಿ ಸುಮಾರು 36 ರಾಷ್ಟ್ರಗಳಿಗೆ ಭೇಟಿ ನೀಡಿದ್ದರು ಎಂದು ಹೇಳಿದೆ.

ಮಾಜಿ ಪ್ರಧಾನಿ ಸಿಂಗ್ ಅವರು ಮೊದಲಿಗೆ 2004ರ ಜುಲೈ 29 ರಿಂದ 31 ರವರೆಗೂ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರ ಪ್ರವಾಸಕ್ಕೆ ಖರ್ಚಾದ ವೆಚ್ಚ 5,38,95,000 ಕೋಟಿ. ಅವರ ಕೊನೆಯ ವಿದೇಶಿ ಪ್ರವಾಸ ಕೈಗೊಂಡಿದ್ದು 2013ರ ಮಾರ್ಚ್ 25 ರಂದು ದಕ್ಷಿಣ ಆಫ್ರಿಕಾಕ್ಕೆ ಇದಕ್ಕೆ ಖರ್ಚಾಗಿದ್ದು ಒಟ್ಟು ರು. 10,94,79,000 ಕೋಟಿ.

ಈ ಬಗ್ಗೆ ಮಾತನಾಡಿರುವ ಕಾರ್ಯಕರ್ತ ಜೇಸುದಾಸ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ(ಏಪ್ರಿಲ್ ವರೆಗಿನ) ಅವರ ವಿದೇಶಿ ಪ್ರವಾಸಗಳ ಮಾಹಿತಿಯನ್ನು ಕೇಳಲಾಗಿದ್ದು, ಸದ್ಯ ಪ್ರಧಾನಿ ಕಚೇರಿ ಮನಮೋಹನ್ ಸಿಂಗ್ ಅವರ ವಿದೇಶಿ ಪ್ರವಾಸದ ಮಾಹಿತಿಯನ್ನಷ್ಟೇ ನೀಡಿದೆ ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅವರು ಭಾರತದಲ್ಲಿ ಇರುವುದಕ್ಕಿಂತ ವಿದೇಶಗಳಲ್ಲೇ ಹೆಚ್ಚಾಗಿ ಉಳಿದಿದ್ದು, ಅವರ ವಿದೇಶಿ ಪ್ರವಾಸದಿಂದ ಭಾರತೀಯರಿಗೆ ಯಾವ ರೀತಿಯ ಪ್ರಯೋಜನಗಳು ಆಗಿವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.
-ಕೃಪೆ: ಕನ್ನಡ ಪ್ರಭ

Write A Comment