ಬೆಂಗಳೂರು: ಎಳೆ ನೀರು ಕುಡಿತೀರಾ, ಪಾನಿ ಪುರಿ ತಿಂತೀರಾ, ಮಧ್ಯಾಹ್ನದ ಮಾಮೂಲಿ ಊಟ ಮಾಡ್ತೀರಾ.. ಈ ಎಲ್ಲ ವೇಳೆ ಚಲಾವಣೆಯಾಗುವುದು 10 ರಿಂದ 50 ರೂ. ಒಳಗಿನ ನೋಟುಗಳು. ಹೌದಲ್ಲಾ ಇದೆಲ್ಲ ಗೊತ್ತಿರುವ ಸಂಗತಿಯೆ ಅಲ್ಲವೇ ಮತ್ತಿನ್ನೇನು ಹೊಸದಾಗಿ ಬರೆಯುತ್ತಿದ್ದಾರಲ್ಲಾ ಎಂದು ಯೋಚನೆ ಮಾಡ್ತಾ ಇದ್ದೀರಾ? ಇಲ್ಲೇ ಇರೋದು ವಿಷಯ, ಇಷ್ಟು ದಿನ ಸಾವಿರ, ಐನೂರು ರೂಪಾಯಿ ನೋಟುಗಳಲ್ಲಿ ಖೋಟಾ ಹಣೆಪಟ್ಟಿ ಇತ್ತು. ಆದರೆ ಅದೀಗ 50, 20 ಮತ್ತು 10 ರೂ ನೋಟುಗಳಿಗೂ ಅಂಟಿಕೊಂಡಿದೆ.
ನೀವು ಸ್ವಲ್ಪ ಎಚ್ಚರ ತಪ್ಪಿದರೂ ನಕಲಿ ನೋಟು ಕೈ ಸೇರುತ್ತದೆ. ಜನರ ನಿರ್ಲಕ್ಷ್ಯವೇ ವಂಚಕರ ಬಂಡವಾಳ. ಸಾಮಾನ್ಯವಾರಿ ಸಾವಿರ ಮತ್ತು ಐದು ನೂರು ನೋಟ್ ಆದರೆ ಎಲ್ಲರೂ ಒಮ್ಮೆ ಪರಿಶೀಲನೆ ಮಾಡಿತ್ತಾರೆ. 50, 20 ರ ನೋಟನ್ನೂ ನೋಡದೇ ಕಿಸೆಗೆ ಹಾಕಿಕೊಳ್ಳುತ್ತೇವೆ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಯವುದನ್ನು ವಂಚಕರು ಕಲಿತುಕೊಂಡಿದ್ದಾರೆ. ಆಟೋ, ಬಿಎಂಟಿಸಿ ಬಸ್ ಗಳಲ್ಲೂ ಈ ಬಗೆಯ ನೋಟುಗಳ ಹಾವಳಿಯಿದೆ. ಕೊಂಚ ಯಾಮಾರಿದರೂ ನಿಮ್ಮ ಕೈಗೆ ನಕಲಿ ನೋಟು ಸಿಕ್ಕಿಬಿಡುತ್ತದೆ. ಇವು ಎಲ್ಲಿಂದ ಬರುತ್ತವೆ ಎಂಬುದಕ್ಕೆ ಪೊಲೀಸರೇ ಉತ್ತರ ಹೇಳಬೇಕು.
ಗುರುತಿಸುವುದು ಹೇಗೆ?
ಗುರುತಿಸುವುದು ಬಹಳ ಸುಲಭ. 50 ರೂ ನೋಟನ್ನೆ ಉದಾಹರಣೆಗೆ ತೆಗೆದುಕೊಳ್ಳೋಣ. ಅಸಲಿ ನೋಟಿನ ಎಡಮೂಲೆಯಲ್ಲಿ ಡಾಟ್ ಗಳ ರೀತಿಯಲ್ಲಿ ಗುರುತುಗಳು ಸರ್ಕಲ್ ಒಂದರ ಮಧ್ಯೆ ಇರುತ್ತವೆ. ಆದರೆ ಖೋಟಾ ನೋಟಿನ ಅದೇ ಜಾಗದಲ್ಲಿ ಹೂವಿನಾಕಾರದ ಚಿಹ್ನೆ ಇರುತ್ತದೆ. ಅಲ್ಲದೇ ಸ್ಪರ್ಶ ಜ್ಞಾನದ ಮೂಲಕ ಕಂಡುಹಿಡಿಯಬಹುದು. ನೋಟ್ ಛಾಪಿಸಿದ ಇಸವಿಯೂ ಪ್ರಿಂಟ್ ಆಗಿರುವುದಿಲ್ಲ.
ಏನು ಮಾಡಬೇಕು?
ಕೋಟಾ ನೋಟು ಸಿಕ್ಕರೆ ಏನು ಮಾಡಬೇಕು ಎಂಬ ಸಂದಿಗ್ಧ ಉಂಟಾಗುತ್ತದೆ. ಗೊತ್ತಿದ್ದೂ ಚಲಾವಣೆಗೆ ಮುಂದಾದರೆ ಪೊಲೀಸರ ಕೈ ಗೆ ಸಿಕ್ಕಿ ಬೀಳುವ ಭಯ. ಚಲಾವಣೆ ಮಾಡದಿದ್ದರೆ ಮಷ್ಟ ಮಾಡಿಕೊಳ್ಳುವ ಅಂಜಿಕೆ. ಬ್ಯಾಂಕ್ ಗೆ ತೆಗೆದುಕೊಂಡು ಹೋದರೆ ಹರಿದು ಹಾಕುತ್ತಾರೆ ಅನ್ನೋದು ಗೊತ್ತು. ಹಾಗಾದರೆ ಏನು ಮಾಡಬೇಕು? ಉತ್ತರ ಕಷ್ಟ… ಆದರೆ ಒಂದು ಇಂಥ ನೋಟುಗಳನ್ನು ಜೇಬಿಗಿಳಿಸುವ ಮುನ್ನ ಒಮ್ಮೆ ಗಮನ ಹರಿಸಿದರೆ ಅರ್ಧ ತಲೆಬಿಸಿ ತಪ್ಪಿದಂತೆ.
ಎಲ್ಲಿಂದ ಬರ್ತವೇ?
ಪಾಕಿಸ್ತಾನದಲ್ಲಿ ಮುದ್ರಣವಾಗುವ ನೋಟುಗಳು ಬಾಂಗ್ಲಾ ಮೂಲಕ ದೇಶದ ಒಳಕ್ಕೆ ಬರುತ್ತವೆ ಎಂಬುದನ್ನು ಗುಪ್ತಚರ ಇಲಾಖೆ ಹಲವಾರು ಬಾರಿ ದೃಢಮಾಡಿದೆ. ಒದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿದೆ. ಆದರೆ ಬೆಂಗಳೂರಿಗೆ ಹೇಗೆ ಬರುತ್ತವೆ? ಎಂಬುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. ಹೈದ್ರಾಬಾದ್ ಮೂಲಕ ಬೆಂಗಳೂರು ತಲುಪುತ್ತವೆ ಎಂದು ಹೇಳಲಾಗುತ್ತದೆ.