ರಾಷ್ಟ್ರೀಯ

ಇಬ್ಬರು ಯುವತಿಯರ ಮೇಲೆ 20 ಕಾಮುಕರ ನಿರಂತರ ಅತ್ಯಾಚಾರ

Pinterest LinkedIn Tumblr

8805Rapee

ಎಷ್ಟೇ ಕಾನೂನನ್ನು ಬಲಪಡಿಸಿದರೂ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಖಂಡಾವಾ ಜಿಲ್ಲೆಯಲ್ಲಿ ಇಬ್ಬರು ಯುವತಿಯರನ್ನು ಅಪಹರಿಸಿದ ಕಾಮುಕ ತನ್ನ ಸ್ನೇಹಿತರೊಡಗೂಡಿ 15 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ ಹೇಯ ಘಟನೆ ನಡೆದಿದೆ.

ಕಳೆದ 15 ದಿನಗಳ ಹಿಂದೆ ಮನೆಯಿಂದ ಪರಾರಿಯಾಗಿದ್ದ ಯುವತಿಯರಿಗೆ ಬಸ್‌ನಲ್ಲಿ ಪರಿಚಿತನಾದ ಒಬ್ಬ ವ್ಯಕ್ತಿ  ಕೆಲಸ ಕೊಡಿಸುವ ನೆಪ ಹೇಳಿ ಕರೆದೊಯ್ದು ಅವರನ್ನು ಹೊಶಂದಾಬಾದ್‌ನ ಮನೆಯೊಂದರಲ್ಲಿ ಕೂಡಿ ಹಾಕಿದ್ದು ತದ ನಂತರ ಅವರಿಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ ಈ ಯುವಕ ತನ್ನ ಕಾಮ ತೃಷೆ ತೀರಿಸಿಕೊಂಡ ಮೇಲೆ ಸ್ನೇಹಿತರನ್ನೂ ಕರೆತಂದಿದ್ದು ಅವರೂ ಸಹ ತಮ್ಮ ಕಾಮ ಪಿಪಾಸುತನವನ್ನು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.

ಸತತ ಹದಿನೈದು ದಿನಗಳ ಕಾಲ 20 ಕಾಮುಕರು ನಿರಂತರವಾಗಿ ಅತ್ಯಾಚಾರವೆಸಗಿದ್ದು, ಅವರಿಲ್ಲದ ಸಮಯದಲ್ಲಿ ಅಲ್ಲಿಂದ ತಪ್ಪಿಸಿಕೊಂಡ ಯುವತಿಯರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದು ಅತ್ಯಾಚಾರ ನಡೆಸಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment