ರಾಷ್ಟ್ರೀಯ

ಮಹಾರಾಷ್ಟ್ರ ಸರ್ಕಾರದಿಂದ ಮಟನ್ ಮೇಲೂ ನಿಷೇಧದ ಸಾಧ್ಯತೆ; ಬಾಂಬೆ ಹೈಕೋರ್ಟ್ ಗೆ ಉತ್ತರ

Pinterest LinkedIn Tumblr

Goats

ಮುಂಬೈ: ಬಾಂಬೆ ಹೈ ಕೋರ್ಟ್ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಬಿಜೆಪಿ ನಾಯಕತ್ವದ ಮಹಾರಾಷ್ಟ್ರ ಸರ್ಕಾರ ಮೇಕೆಗಳನ್ನು ಕಡಿಯುವುದಕ್ಕು ನಿಷೇಧವನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದಿದೆ.

ಹಸುಗಳು ಎತ್ತುಗಳನ್ನು ಕೊಳ್ಳುವುದನ್ನು ಹಾಗೂ ತಿನ್ನುವುದನ್ನು ನಿಷೇಧಿಸಿದ್ದೇಕೆ, ಈ ನಿಷೇಧ ಬೇರೆ ಪ್ರಾಣಿಗಳಿಗೇಕೆ ಅನ್ವಯ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನೆನ್ನೆ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿತ್ತು.

ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಇತ್ತೀಚಿಗೆ ಮಹರಾಷ್ಟ್ರ ಸರ್ಕಾರ ಜಾರಿಗೆ ತಂದಿರುವ ಹಸು ಮತ್ತು ಎತ್ತುಗಳನ್ನು ಕೊಲ್ಲುವದಕ್ಕೆ ಮತ್ತು ತಿನ್ನುವುದಕ್ಕೆ ನಿಷೇಧ ಹೇರಿರುವುದನ್ನು ಹಲವಾರು ಜನರು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಈ ಅರ್ಜಿಯನ್ನು ವಿ ಎಂ ಕಾನಡೆ ಮತ್ತು ಎ ಆರ್ ಜೋಷಿ ಅವರುಗಳನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆ ಮಾಡಿದೆ.

ಈ ಅರ್ಜಿಯ ಪ್ರಕಾರ ನಿಷೇಧಿಸಲ್ಪಟ್ಟ ಪ್ರಾಣಿಗಳನ್ನು ರಾಜ್ಯದ ಹೊರಗೆ ಕೊಂದು ಅದರ ಚರ್ಮವನ್ನು ನಮ್ಮ ರಾಜ್ಯದಲ್ಲಿ ಬಳಸಬಹುದಾಗಿದೆ. “ಹಸು ಅಮತ್ತು ಎತ್ತುಗಳ ಮೇಲಷ್ಟೇ ನಿಷೇಧವೇಕೆ? ಮೇಕೆಗಳ ಮೇಲೆ ಏಕಿಲ್ಲ?” ಎಂದು ವಿಭಾಗೀಯ ಪೀಠ ಪ್ರಶ್ನಿಸಿದ್ದಕ್ಕೆ, ಸರ್ಕಾರ ಅದನ್ನೂ ಪರಿಶೀಲಿಸುತ್ತಿದೆ ಎಂದು ಸರ್ಕಾರಿ ವಕೀಲ ಸುನಿಲ್ ಮನೋಹರ್ ತಿಳಿಸಿದ್ದಾರೆ.

“ಇದು ಪ್ರಾರಂಭ ಮಾತ್ರ(ಹಸು ಮತ್ತು ಎತ್ತುಗಳನ್ನು ಕೊಲ್ಲುವುದಕ್ಕೆ ನಿಷೇಧ). ಇತರ ಪ್ರಾಣಿಗಳನ್ನು ಕೊಲ್ಲುವುದನ್ನೂ ನಿಷೇಧಿಸಲು ಸರ್ಕಾರ ಚಿಂತಿಸುತ್ತಿದೆ . ಸದ್ಯಕ್ಕೆ ಹಸುಗಳನ್ನು ಮತ್ತು ಎತ್ತುಗಳನ್ನು ರಕ್ಷಿಸುವುದಕ್ಕೆ ರಾಜ್ಯ ಬದ್ಧವಾಗಿದೆ” ಎಂದು ಅವರು ತಿಳಿಸಿದ್ದಾರೆ.

Write A Comment