ರಾಷ್ಟ್ರೀಯ

ನ್ಯಾಯಾಂಗದಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು : ಮೋದಿ

Pinterest LinkedIn Tumblr

Modi---2

ನವದೆಹಲಿ, ಏ.5- ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಮೂಗು ತೂರಿಸಬಾರದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಅಖಿಲ ಭಾರತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಮಗ್ರ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಹಾಗೆಯೇ ನಿಮಗೆ ಇಂದು ಸಮರ್ಥ, ದಕ್ಷ ಹಾಗೂ ಸಶಕ್ತ ನ್ಯಾಯಾಂಗ ವ್ಯವಸ್ಥೆಯ ಅವಶ್ಯಕತೆಯಿದೆ. ನ್ಯಾಯಾಂಗದಲ್ಲಿ ಒಳ್ಳೆಯ ಜನರೇ ಭಾಗವಹಿಸಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು. ನೀವು ಈ ದೇಶದ ಭವಿಷ್ಯದ ಜನಾಂಗವನ್ನು ರೂಪಿಸುವವರು. ದೇವರು ನಿಮ್ಮ ಮೂಲಕ ಈ ಕೆಲಸ ಮಾಡಿಸುತ್ತಿದ್ದಾನೆ. ಅದರಿಂದಾಗಿ ನೀವುಗಳು ಸರಿಯಾದ ಮಾರ್ಗದಲ್ಲೇ ನಡೆಯಬೇಕಾಗುತ್ತದೆ. ಈ ದೇಶದ ಕೋಟ್ಯಂತರ ಜನತೆ ನಿಮ್ಮ ಮೇಲೆ ಅಪಾರ ನಂಬಿಕೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಜನತೆಯ ಆ ನಂಬಿಕೆ, ನಿರೀಕ್ಷೆಗಳು ಹುಸಿಯಾಗದಂತೆ ನೀವು ನಡೆದುಕೊಳ್ಳಬೇಕು ಎಂದು ಮೋದಿ ಕಿವಿಮಾತು ಹೇಳಿದರು.

ನ್ಯಾಯಾಧೀಶರೆಂದರೆ ದೇವರು, ನ್ಯಾಯಾಲಯ ಎಂದರೆ ದೇವಾಲಯಗಳು ಎಂದೇ ಜನ ನಂಬಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ನ್ಯಾಯಾಲಯಗಳಲ್ಲಿ ಅವರಿಗೆ  ನ್ಯಾಯ ಒದಗಿಸಿಕೊಡುವ ಗುರುತರ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಯಾವುದೇ ಕಾರಣಕ್ಕೂ ನ್ಯಾಯದಾನದಲ್ಲಿ ವಿಳಂಬವಾಗಬಾರದು ಮತ್ತು ಅನ್ಯಾಯವಾಗಬಾರದು ಎಂದು ಹೇಳಿದ ಪ್ರಧಾನಿ ಮೋದಿ ಅವರು, ಜನರ ನಿರೀಕ್ಷೆ, ನಂಬಿಕೆಗಳು ಹುಸಿಯಾದರೆ, ನ್ಯಾಯಾಂಗ ವ್ಯವಸ್ಥೆಯೇ ಹಾಳಾಗಿ ಹೋಗುತ್ತದೆ ಎಂದು ತಿಳಿಸಿದರು.

Write A Comment